ಮ್ಯಾಕ್ಸ್ ಜೊತೆಗೆ ಮಾಣಿಕ್ಯ ಬ್ಯೂಟಿ?

150

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಬಗ್ಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದೆ. ವಿಜಯ್ ಕಾರ್ತಿಕೇಯನ್ ಮೊದಲ ಬಾರಿಗೆ ಸುದೀಪ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುದೀಪ್ ಗೆ ಜೋಡಿಯಾಗಿ ನಟಿ ವರಲಕ್ಷ್ಮಿ ಶರತಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌಥ್ ಸಿನಿ ದುನಿಯಾದ ಸ್ಟಾರ್ ನಟಿ, ಘಟಾನುಘಟಿ ನಾಯಕರ ಎದುರು ಲೇಡಿ ವಿಲನ್ ಆಗಿಯೂ ಮಿಂಚುತ್ತಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಜೊತೆಗೆ ನಟಿಸುವ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮ್ಯಾಕ್ಸ್ ಚಿತ್ರದಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಶೀಘ್ರದಲ್ಲಿ ಅಧಿಕೃತ ಮಾಹಿತಿ ಹೊರ ಬೀಳಲಿದೆಯಂತೆ.

ವಿ ಕ್ರಿಯೇಷನ್ಸ್ ಮ್ಯಾಕ್ಸ್ ಸಿನಿಮಾ ಮಾಡುತ್ತಿದೆ. ಅಜನೀಶ್ ಬಿ ಲೋಕನಾಥ್ ಮ್ಯೂಸಿಕ್ ಇದೆ. ಶೇಖರ್ ಚಂದ್ರು ಕ್ಯಾಮೆರಾ, ಶಿವಕುಮಾರ್ ಆರ್ಟ್ ಡೈರೆಕ್ಟರ್ ಆಗಿದ್ದಾರೆ. ನಟಿ ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಅನಿರುದ್ಧ್ ಭಟ್ ನಟಿಸುತ್ತಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ.




Leave a Reply

Your email address will not be published. Required fields are marked *

error: Content is protected !!