ಗೆಲುವಿನ ಓಟ ಮುಂದುವರೆಸಲು ಸಜ್ಜಾದ ಬ್ಲೂ ಬಾಯ್ಸ್

150

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಇಂದು ಎರಡು ಬಲಿಷ್ಠ ತಂಡಗಳ ಕಾದಾಟ ನಡೆಯಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಧರ್ಮಶಾಲಾದಲ್ಲಿ ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಹಬ್ಬವಿದೆ.

ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ಆಡಿರುವ 4 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿವೆ. 8 ಪಾಯಿಂಟ್ ಗಳನ್ನು ಹೊಂದಿರುವ ತಂಡಗಳ ರನ್ ರೇಟ್ ಆಧಾರದ ಮೇಲೆ ನ್ಯೂಜಿಲೆಂಡ್ ಮೊದಲು, ಭಾರತ 2ನೇ ಸ್ಥಾನದಲ್ಲಿದೆ. ಕೇನ್ ವಿಲಿಯಮ್ ಸನ್ ಬಳಗದಲ್ಲಿ ಬಲಿಷ್ಠ ಆಟಗಾರರ ಪಡೆಯಿದೆ.

ಇತ್ತ ಭಾರತದ ತಂಡದಲ್ಲಿಯೂ ಸಹ ಆರ್ಭಟಿಸುವ ಆಟಗಾರರಿದ್ದು, ಒಬ್ಬರಾದ ಮೇಲೆ ಒಬ್ಬರಿಂದ ಶತಕಗಳು ಮೂಡಿ ಬರುತ್ತಿವೆ. ಹೀಗಾಗಿ ಟೀಂ ಇಂಡಿಯಾ ಆಟಗಾರರು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಲಿಟಲ್ ಮಾಸ್ಟರ್ ಸಚಿನ್ ತಂಡೂಲ್ಕರ್ ಶತಕಗಳನ್ನು ಸರಿಗಟ್ಟಲು ಇನ್ನೊಂದು ಹೆಜ್ಜೆ ಇದೆ. ಇವತ್ತಿನ ಪಂದ್ಯದಲ್ಲಿ ಶತಕ ಬಂದರೆ 49 ಶತಕಗಳು ಸಮನಾಗಲಿವೆ. ವಿಶ್ವಕಪ್ ಮುಗಿಯುದರೊಳಗೆ ಸಚಿನ್ ದಾಖಲೆ ಮುರಿದು ಹೋಗುವ ಸಾಧ್ಯತೆ ಹೆಚ್ಚಿದೆ.

ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುವ ಪಂದ್ಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಭಾನುವಾರ ಆಗಿರುವುದರಿಂದ ಟಿಕೆಟ್ ಸಿಗದೆ ಇರುವವರು ಪಂದ್ಯ ಮುಗಿಯುವ ತನಕ ಟಿವಿ ಮುಂದೆ ಫಿಕ್ಸ್ ಆಗಿರಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!