ಮುಂಬೈನಲ್ಲಿ ಮತ್ತೊಂದು ಸಾವು

302

ಮುಂಬೈ: ಡೆಡ್ಲಿ ಕರೋನಾಗೆ ದೇಶದಲ್ಲಿ ಮತ್ತೊಬ್ಬರು ಸಾವನ್ಪಪ್ಪಿದ್ದಾರೆ. 65 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸೌದಿ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದಿದ್ರು. ಕರೋನಾ ಸೋಂಕು ಇರುವುದು ಪಕ್ಕಾ ಆಗಿತ್ತು. ಹೀಗಾಗಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸಾವಿನಿಂದಾಗಿ ಮುಂಬೈನಲ್ಲಿ ಕರೋನಾಗೆ ಬಲಿಯಾದ ಸಂಖ್ಯೆ 3ಕ್ಕೆ ಏರಿದೆ. ದೇಶದಲ್ಲಿ 11ಕ್ಕೇರಿದೆ. ಈ ಮೂಲಕ ದೇಶದಲ್ಲಿ ಸಾಕಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ, ಶಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಹೀಗಾಗಿ ಇಡೀ ದೇಶ ಲಾಕ್ ಡೌನ್ ಸ್ಥಿತಿಯಲ್ಲಿದೆ. ಹೀಗಾಗಿ ಯಾರೂ ಹೊರ ಬರದೆ ಮನೆಯಲ್ಲಿ ಇರಿ.

ಹೊರಗೆ ಬರಬೇಡಿ.. ಮನೆಯಲ್ಲಿ ಇರಿ…




Leave a Reply

Your email address will not be published. Required fields are marked *

error: Content is protected !!