ಡೆಡ್ಲಿ ಕರೋನಾ ವಿರುದ್ಧ ಗೆದ್ದ ಕೇರಳದ ವೃದ್ಧ ದಂಪತಿ

326

ಕೊಟ್ಟಾಯಂ: ನೆರೆಯ ಕೇರಳದಲ್ಲಿ ಕರೋನಾ ಭೀತಿ ಜೋರಾಗಿದೆ. ದೇಶದಲ್ಲಿ ಕರೋನಾ ಹಾವಳಿ ಹೆಚ್ಚಾಗಿರುವ ಟಾಪ್ ರಾಜ್ಯಗಳ ಲಿಸ್ಟ್ ನಲ್ಲಿ ಕೇರಳಯಿದೆ. ಹೀಗಾಗಿ ಜನ ಸಾಕಷ್ಟು ಭಯಭೀತರಾಗಿದ್ದಾರೆ. ಇದರ ನಡುವೆ ಹಿರಿಯ ಜೋಡಿಯೊಂದು ಜಯ ಸಾಧಿಸಿದೆ.

93 ವರ್ಷದ ಥಾಮಸ್ ಹಾಗೂ 88 ವರ್ಷದ ಪತ್ನಿ ಮರಿಯಮ್ಮ ಕೋವಿಡ್ 19ನಿಂದ ಗುಣಮುಖರಾಗಿದ್ದಾರೆ. ಈ ದಂಪತಿಗೆ ಕಳೆದ 20 ದಿನಗಳಿಂದ ಚಿಕಿತ್ಸೆ ನೀಡಲಾಗಿದೆ. ಸತತ 2 ಬಾರಿ ಕರೋನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದ್ದು ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಈ ಬೆಳವಣಿಗೆ ಜನರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!