ರಾಜ್ಯದಲ್ಲಿ ಇಂದು 13 ಜನ ಡಿಸ್ಚಾರ್ಜ್

449

ಬೆಂಗಳೂರು: ರಾಜ್ಯದಲ್ಲಿ ಕರೋನಾ ಹಾವಳಿ ಜೋರಾಗಿದೆ. ಒಂದಲ್ಲ ಒಂದು ಹೊಸ ಕೇಸ್ ಪತ್ತೆಯಾಗುತ್ತಲೇ ಇವೆ. ದೇಶದ ಮೊದಲ ಕರೋನಾ ಸಾವಾಗಿದ್ದ ಕಲಬುರಗಿಯ ಸಿದ್ದಿಕಿಗೆ ಚಿಕಿತ್ಸೆ ನೀಡಿದ್ದ ಡಾಕ್ಟರ್ ಪತ್ನಿಗೆ ಕರೋನಾ ಪಾಸಿಟಿವ್ ಬಂದಿದೆ. ಇದರ ನಡುವೆ ಸಂತೋಷದ ವಿಷ್ಯ ಅಂದ್ರೆ ಇಂದು 13 ಜನ ಡಿಸ್ಚಾರ್ಜ್ ಆಗಿದ್ದಾರೆ. ಹೀಗೆ ಡಿಸ್ಚಾರ್ಜ್ ಆದವರು ಪಾಸಿಟಿವ್ ಬಂದವರೆಂದು ಅಲ್ಲ. ಐಸೋಲೇಷನ್ ನಲ್ಲಿ ಇರುವವರು ಆಗಿದ್ದಾರೆ.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವೆಬ್ ಸೈಟ್ ಪ್ರಕಾರ ರಾಜ್ಯದಲ್ಲಿ ಇಂದು 13 ಜನ ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆ 1,  ದಕ್ಷಿಣ ಕನ್ನಡ 6, ಕಲಬುರಗಿ 1, ಶಿವಮೊಗ್ಗ 2, ವಿಜಯಪುರ 2 ಹಾಗೂ ಯಾದಗಿರಿ 1 ಹೀಗೆ ವಿವಿಧ ಜಿಲ್ಲೆಗಳಲ್ಲಿ 13 ಜನ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಲಾಗಿದೆ. ಇದು ನಿಜಕ್ಕೂ ರಾಜ್ಯದ ಜನತೆಗೆ ಖುಷಿಯ ಸಂಗತಿ. ಇವರಲ್ಲಿ ಯಾರಿಗೂ ಸೋಂಕು ದೃಢಪಟ್ಟಿದೆ. ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಗೊಂದಲ ಮಾಡಿಕೊಳ್ಳಬೇಡಿ. ನಿಗಾದಲ್ಲಿರುವವರು ಡಿಸ್ಚಾರ್ಜ್ ಆಗಿರುವವರಿದ್ದಾರೆ. ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕರೋನಾ ಸೋಂಕು ದೃಢಪಟ್ಟ ವರದಿಯಾಗಿಲ್ಲ.




Leave a Reply

Your email address will not be published. Required fields are marked *

error: Content is protected !!