ನಕಲಿ ಸ್ಯಾನಟೈಸರ್: ಇಂದು ಮತ್ತಿಬ್ಬರನ್ನ ಬಂಧಿಸಿದ ಸಿಸಿಬಿ

302

ಬೆಂಗಳೂರು: ನಕಲಿ ಸ್ಯಾನಟೈಸರ್ ಹಾಗೂ ಥರ್ಮಾಮೀಟರ್ ಮಾರಾಟ ಮಾಡ್ತಿದ್ದ ಇಬ್ಬರನ್ನ ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯ ನಗರದಲ್ಲಿ ಕಡಿಮೆ ಬೆಲೆಯ ಥರ್ಮಾಮೀಟರ್ ನ್ನ ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಕೇಶವನ್ ಎಂಬಾತನನ್ನ ಬಂಧಿಸಲಾಗಿದೆ.

ಇನ್ನು ಶ್ರೀರಾಂಪುರದಲ್ಲಿ ನಕಲಿ ಸ್ಯಾನಟೈಸರ್ ಮಾರಾಟ ಮಾಡ್ತಿದ್ದ ಶಿವಕುಮಾರ ಎಂಬಾತನನ್ನ ಬಂಧಿಸಲಾಗಿದೆ. ನಿನ್ನೆಯಷ್ಟೇ ಸಿಸಿಬಿ ಟೀಂ ಎನ್ 95 ಹೆಸರಿನ ನಕಲಿ ಮಾಸ್ಕ್ ಮಾರಾಟ ಮಾಡ್ತಿದ್ದವರನ್ನ ಬಂಧಿಸಿದ್ರು. ಇಂದು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜ್ವಲ ಸರ್ಜಿಕಲ್ ಮತ್ತು ಸೈಂಟಿಫಿಕ್ಸ್ ಅಂಗಡಿ ಮೇಲೆ ದಾಳಿ ಮಾಡಿದ ಸಿಸಿಬಿ, 8 ಲಕ್ಷ ಬೆಲೆ ಬಾಳುವ 70 ನಕಲಿ ಇನ್ರಾರೆಡ್ ಫೋರ್ ಹೆಡ್ ಥರ್ಮಾಮೀಟರ್ ಗಳನ್ನ ಹಾಗೂ 60 ಬ್ಯಾಟರಿಗಳನ್ನ ಜಪ್ತಿ ಮಾಡಿ ಕೇಶವನ್ ಎಂಬಾತನನ್ನ ಬಂಧಿಸಿದ್ದಾರೆ.

ಶ್ರೀರಾಂಪುರದಲ್ಲಿ 180 ಲೀಟರ್ ಐಸೊಪ್ರೊಪೈಲ್ ಆಲ್ಕೋಹಾಲ್, 10 ಲೀಟರ್ ಗ್ಲಿಸರಿನ್ ಮತ್ತು 65 ಲೀಟರ್ ನಕಲಿ ಸ್ಯಾನಟೈಸರ್ ಹಾಗೂ 5382 ಬಾಟಲ್ ಗಳನ್ನ ವಶಕ್ಕೆ ಪಡೆದು, ಶಿವಕುಮಾರ ಎಂಬಾತನನ್ನ ಬಂಧಿಸಿದ್ದಾರೆ. ಆರೋಪಿ ಮನೆಯಲ್ಲಿ ಸಿಕ್ಕ 180 ಲೀಟರ್ ಐಸೊಪ್ರೊಪೈಲ್ ಗೆ ಬೆಂಕಿ ತಗುಲಿದ್ರೆ ಇಡೀ ಅಪಾರ್ಟ್ ಮೆಂಟ್ ಬೆಂಕಿಗಾಹುತಿ ಆಗ್ತಿತ್ತು ಎಂದು ಪೊಲೀಸ್ರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!