ಕ್ರಿಕೆಟ್ ಬುಕ್ಕಿಂಗ್ ಮಾಫಿಯಾದಲ್ಲಿ ಬೆಳಗಾವಿ ಉದ್ಯಮಿಗೆ ಶಾಕ್

362

ಬೆಂಗಳೂರು: ಕ್ರಿಕೆಟ್ ಬುಕ್ಕಿಂಗ್ ಮಾಫಿಯಾ ಜಾಲ ಜಾಲಾಡ್ತಿರುವ ಸಿಸಿಬಿ ಪೊಲೀಸ್ರು ಇದೀಗ ಉದ್ಯಮಿ ಹಾಗೂ ಕೆಪಿಎಲ್ ಬೆಳಗಾವಿ ತಂಡದ ಮಾಲೀಕರೊಬ್ಬರ ವಿಚಾರಣೆ ನಡೆಸಿದ್ದಾರೆ.

ಬೆಳಗಾವಿ ಪ್ಯಾಂಥರ್ಸ್ ಟೀಂ ಮಾಲೀಕ ಹಾಗೂ ಉದ್ಯಮಿ ಅಲಿ ಅಸ್ಫಾಕ ಥಾರ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲೋಕಲ್, ನ್ಯಾಷನಲ್, ಇಂಟರ್ ನ್ಯಾಷನಲ್ ಮಟ್ಟದ ಕ್ರಿಕೆಟ್ ಬುಕ್ಕಿಂಗ್ ನಡೆಸ್ತಿದ್ದ ಆರೋಪದ ಮೇಲೆ, ಬೆಂಗಳೂರು ಸಿಸಿಬಿ ಪೊಲೀಸ್ರು ಅಲಿ ಅಸ್ಫಾಕ ಥಾರ ವಶಕ್ಕೆ ಪಡೆದಿದ್ದಾರೆ.

ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಕೆಲ ಕ್ರಿಕೆಟರ್ ಹೆಸರು ಬಾಯಿಬಿಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. ಇನ್ನುಳಿದ ಮಾಹಿತಿ ಪಡೆದ ನಂತ್ರ ಸ್ಪಷ್ಟ ಮಾಹಿತಿ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!