ಮ್ಯಾಚ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅರೆಸ್ಟ್

399

ಬೆಂಗಳೂರು: ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಸ್ಫಕ ಥಾರಾ ಅವರನ್ನ ಬಂಧಿಸಲಾಗಿದೆ. ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ನಡೆದಂತೆ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಪ್ರೀಮಿಯರ್ ಲೀಗ್ ಟೈಂನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಅಲಿ ಟೂರ್ಸ್ ಅಂಡ್ ಟ್ರಾವಲ್ಸ್ ಸಂಸ್ಥೆಯ ಮಾಲೀಕ ಹಾಗೂ ಬೆಳಗಾವಿ ಪ್ಯಾಂಥರ್ಸ್ ಟೀಂ ಮಾಲೀಕ ಅಲಿ ಅಸ್ಫಕ ಥಾರ ಅವರನ್ನ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಪೊಲೀಸ್ರು ಇಂದು ಬಂಧಿಸಿದ್ದಾರೆ.

ಅಲಿ ದುಬೈ ಮೂಲದ ಬುಕ್ಕಿಯೊಂದಿಗೆ ಸಂಪರ್ಕದಲ್ಲಿದ್ರು ಅನ್ನೋದನ್ನ ಪೊಲೀಸ್ ಜಂಟಿ ಆಯುಕ್ತರಾದ ಸಂದೀಪ ಪಾಟೀಲ ಹೇಳಿದ್ದಾರೆ. ಅಲ್ದೇ, ಬೇರೆ ಬೇರೆ ಪ್ರಾಂಚೈಸಿ ತಂಡದ ಆಟಗಾರರು ಮತ್ತು ಬುಕ್ಕಿಗಳ ಜೊತೆ ಅಲಿ ಸಂಪರ್ಕದಲ್ಲಿದ್ದ ಅನ್ನೋದು ತಿಳಿದಿದೆ. ಹೀಗಾಗಿ ಇದೀಗ ವಿವಿಧ ಪ್ರಾಂಚೈಸಿ ತಂಡಗಳ 34 ಜನ ಆಟಗಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಕಳೆದ ಶುಕ್ರವಾರ ಅಲಿ ಅಸ್ಫಕ ಥಾರ ಅವರನ್ನ ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!