20 ವರ್ಷಗಳ ಬಳಿಕ ‘ನಾನು’ ಮತ್ತೆ ಎಂಟ್ರಿ!

441

ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಉಪೇಂದ್ರ’ ಸಿನ್ಮಾ, 1999ರ ಕಾಲದಲ್ಲಿ ಭರ್ಜರಿ ಹವಾ ಕ್ರಿಯೇಟ್ ಮಾಡಿತ್ತು. 20 ವರ್ಷಗಳ ಹಿಂದೆ ರಿಲೀಸ್ ಆದ ಸಿನ್ಮಾ ಹೊಸ ಅಲೆಯನ್ನೇ ಸ್ಯಾಂಡಲ್ ವುಡ್ ನಲ್ಲಿ ಎಬ್ಬಿಸಿದ್ದು ಸುಳ್ಳಲ್ಲ. ಇದೀಗ ಆ ಸಿನ್ಮಾ ಮತ್ತೆ ಬಿಡುಗಡೆ ಮಾಡಲು ಪ್ಲಾನ್ ನಡೀತಿದೆಯಂತೆ.

ಇತ್ತೀಚಿನ ದಿನಗಳಲ್ಲಿ ಉಪೇಂದ್ರ ಅಭಿಮಾನಿಗಳ ಸಂಖ್ಯೆ ಇನ್ನೂ ಜಾಸ್ತಿಯಾಗ್ತಿದೆ. ಯಂಗ್ ಫ್ಯಾನ್ಸ್ ‘ಉಪೇಂದ್ರ’ ಚಿತ್ರವನ್ನ ಥಿಯೇಟರ್ ನಲ್ಲಿ ನೋಡಿದ್ದು ತುಂಬಾ ಕಡಿಮೆ. ಹೀಗಾಗಿ ನಿರ್ಮಾಪಕಿ ಶಿಲ್ವಾ ಶ್ರೀನಿವಾಸ ಈ ಮೂವಿ ಮರು ಬಿಡುಗಡೆಗೆ ಪ್ಲಾನ್ ನಡೆಸಿದ್ದಾರೆ. ಈ ಬಗ್ಗೆ ನಟ, ನಿರ್ದೇಶಕ ಉಪೇಂದ್ರ ಜೊತೆ ಮಾತುಕತೆ ನಡೆಸಬೇಕಿದೆ.

ಉಪೇಂದ್ರ ಸಿನ್ಮಾ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ ಡಬ್ ಆಗಿತ್ತು. ಇದೀಗ ತಮಿಳಿಗೂ ಡಬ್ ಮಾಡುವ ಮೂಲಕ ಮೂರು ಭಾಷೆಗಳಲ್ಲಿ ‘ಉಪೇಂದ್ರ’ ಸಿನ್ಮಾ ಮತ್ತೆ ರಿಲೀಸ್ ಮಾಡಬೇಕು ಅನ್ನೋದು ನಿರ್ಮಾಪಕಿಯ ಆಸೆ. ‘ನಾನು’ ಥಿಯೇಟರ್ ನಲ್ಲಿ ನೋಡಲು ಮತ್ತೆ ಸಿಗ್ತಾನಾ ಅನ್ನೋದು ಸದ್ಯದ ಪ್ರಶ್ನೆ.




Leave a Reply

Your email address will not be published. Required fields are marked *

error: Content is protected !!