ಹೊಲ ನೋಡಲು ಹೋದಾಗ ನಡೀತು ದುರಂತ

553

ಸಿಂದಗಿ: ಪಟ್ಟಣದ ಹಳೆ ಬಂಕಲಗಿ ರೋಡ್ ಬಳಿಯ ಮಾಳಿಹಳ್ಳದ ಸಮೀಪದ ಬಾವಿಯೊಂದರಲ್ಲಿ ಬಾಲಕರಿಬ್ಬರು ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. 8 ವರ್ಷದ ಬಾಲಕನನ್ನು ರಕ್ಷಿಸಲು ಹೋದ ಯುವಕ ಸಹ ನೀರುಪಾಲಾಗಿದ್ದಾನೆ.

18 ವರ್ಷದ ಸನಾವುಲ್ಲಾ ಗುಂದಗಿ ಹಾಗೂ 8 ವರ್ಷದ ಸೋಹಿಲ ಮೃತ ದುರ್ದೈವಿಗಳಾಗಿದ್ದಾರೆ. ಹೊಲ ನೋಡಲು ಸಂಬಂಧಿಕರೊಂದಿಗೆ ಬಂದ ಇವರಲ್ಲಿ, 8 ವರ್ಷದ ಬಾಲಕ ಸೋಹಿಲ ಈಜಲು ಹೋಗಿದ್ದಾನೆ. ಈತನಿಗೆ ಮೊದ್ಲೇ ಈಜು ಬರುವುದಿಲ್ಲ. ಹೀಗಾಗಿ ಬಾಲಕ ದಂಡೆಯಲ್ಲಿ ಕುಳಿತು ಈಜಲು ಹೋಗಿದ್ದಾನೆ. ಆಗ ಅನಾಹುತ ನಡೆದಿದೆ. ಈ ವೇಳೆ ಬಾಲಕನ್ನು ರಕ್ಷಿಸಲು ಸನಾವುಲ್ಲಾ ಅನ್ನೋ ಯುವಕ ಬಾವಿಗೆ ಜಿಗಿದಿದ್ದಾನೆ. ಆದ್ರೆ, ಬಾಲಕ ಭಯದಿಂದ ಯುವಕನನ್ನು ಗಟ್ಟಿಯಾಗಿ ಹಿಡಿದ ಪರಿಣಾಮ ಇಬ್ಬರು ಮುಳಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ನಾವು ವಿಜಯಪುರದಲ್ಲಿ ಇರೋದು. ಹೋಗೋಣ ಬಾ ಎಂದು ಹೇಳಿದ್ರೆ, ನನ್ನ ಮಾತು ಕೇಳದೆ ಹೊಲ ನೋಡ್ಕೊಂಡು ಬರ್ತಿನಿ ಎಂದು ಹೇಳಿದ್ದ. ನಾನು ವಿಜಯಪುರಕ್ಕೆ ಹೊರಟಿದ್ದೆ. ಇದನ್ನ ಕೇಳಿ ಅರ್ಧ ದಾರಿಯಿಂದ ವಾಪಸ್ ಬಂದೆ. ನನ್ಗೆ ಇರೋದು ಒಬ್ಬನೆ ಮಗ ಸರ್ ಎಂದು ಮೃತ ಸನಾವುಲ್ಲಾ ತಂದೆ ಕಣ್ಣೀರು ಹಾಕಿದ್ರು.

ಪಟ್ಟಣದ 8ನೇ ವಾರ್ಡಿನ ತೆಕ್ಕೆ ಓಣಿಯಲ್ಲಿ ಇವರ ಸಂಬಂಧಿಕರ ಮನೆಗೆ ಭಾನುವಾರ ಬಂದಿದ್ದಾರೆ. ಬರ್ಥ್ ಡೇ ಹಿನ್ನೆಲೆಯಲ್ಲಿ ಕುಟುಂಬಸ್ಥರೊಂದಿಗೆ ಭಾನುವಾರ ಬಂದು ಸೋಮವಾರ ವಾಪಸ್ ಊರಿಗೆ ಹೋಗುವ ಟೈಂನಲ್ಲಿ ಒಂದಿಷ್ಟು ಹೊತ್ತು ಹೊಲಕೆ ಹೋಗಿ ಬರಬೇಕು ಎಂದು ಬಂದಾಗ ಅನಾಹುತ ಸಂಭವಿಸಿದೆ. ಸನಾವುಲ್ಲಾ ಮೃತದೇಹ ಪತ್ತೆಯಾಗಿದ್ದು, ಬಾಲಕ ಸೋಹಿಲ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಹೆಚ್.ಎಸ್ ಹೊಸಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!