ಬಿಜೆಪಿ ಕಚೇರಿಯಲ್ಲಿ ಪತ್ನಿಗೆ ಬಾರಿಸಿದ ಲೀಡರ್

329

ನವದೆಹಲಿ: ಎಲೆಕ್ಷನ್ ಗೆ ಸಂಬಂಧಿಸಿದಂತೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ, ಲೀಡರ್ ವೊಬ್ಬರು ಪತ್ನಿಯಲ್ಲಿ ಹೊಡೆದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡ್ತಿದೆ. ಅಲ್ದೇ, ಅವರನ್ನ ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಕೇಂದ್ರ ಸಚಿವ ಪ್ರಕಾಶ ಜಾವೇಡ್ಕರ್, ಚುನಾವಣೆ ಕುರಿತು ಸಭೆ ನಡೆಸಿದ್ರು. ಸಭೆಯಲ್ಲಿ ದೆಹಲಿಯ ಮೆಹ್ರೌಲಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಆಜಾದ್ ಸಿಂಗ್ ಭಾಗವಹಿಸಿದ್ರು. ಇವರ ಪತ್ನಿ ದಕ್ಷಿಣ ದೆಹಲಿಯ ಮಾಜಿ ಮೇಯರ್ ಸರಿತಾ ಚೌಧರಿ ಅವರು ಸಭೆಯಲ್ಲಿದ್ರು. ಇವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್ ಹಂತಕ್ಕೆ ಬಂದಿದೆಯಂತೆ. ಗುರುವಾರ ಈ ಘಟನೆ ನಡೆದಾಗ ಪ್ರಕಾಶ ಜಾವೇಡ್ಕರ್ ಕಚೇರಿಯೊಳಗೆ ಇದ್ರು ಅಂತಾ ಹೇಳಲಾಗ್ತಿದೆ. ಆಜದ್ ಸಿಂಗ್ ಜಾಗಕ್ಕೆ ವಿಕಾಸ ತನ್ವರ್ ಅವರನ್ನ ನೇಮಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!