ಮಸೀದಿಯಲ್ಲಿ ಸಭೆ: ಆಯೋಜಿಕರ ವಿರುದ್ಧ ಬಿತ್ತು ಕೇಸ್

290

ನವದೆಹಲಿ: ಇಡೀ ವಿಶ್ವದಲ್ಲಿ ಕರೋನಾ ಆರ್ಭಟ ಜೋರಾಗಿದೆ. ಇದರ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಧಾರ್ಮಿಕ ನಡೆಸಲಾಗಿದೆ. ನಗರದ ನಿಜಾಮುದ್ದಿನ್ ಜಮಾತ್ ಮಸೀದಿಯಲ್ಲಿ ಮಾರ್ಚ್ 1 ರಿಂದ 15ರ ವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ. ಇದ್ರಿಂದಾಗಿ ಅನೇಕರಿಗೆ ಕರೋನಾ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಆಯೋಜಕರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ದೆಹಲಿ ಮಸೀದಿಯ ಮೌಲಾನಾ ಸಾದ್ ಹಾಗೂ ತಬ್ಲೀಗಿ ಜಮಾತ್ ದ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಂಕ್ರಾಮಿಕ ರೋಗ ಕಾಯ್ದೆ 1897ರ ಮತ್ತು ಇತರೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ದೆಹಲಿ ಪೊಲೀಸ್ ಕಮಿಷನರ್ ಎಸ್.ಎನ್ ಶ್ರೀವಾತ್ಸವ ಮಾತ್ನಾಡಿದ್ದು, ಒಟ್ಟಾಗಿ ಜನರನ್ನ ಸೇರಿಸುವುದು ನಿರ್ಬಂಧಿಸಲಾಗಿದೆ. ಇದನ್ನ ಉಲ್ಲಂಘಿಸಿದಕ್ಕಾಗಿ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.

ಈ ಧಾರ್ಮಿಕ ಸಭೆಯಲ್ಲಿ ದುಬೈ, ಇಂಡೋನೇಷಿಯಾ, ಮಲೇಷ್ಯಾ ಸೇರಿದಂತೆ ಬಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಸೇರಿದ್ರು. ಇದ್ರಿಂದಾಗಿ ಅನೇಕರಿಗೆ ಕರೋನಾ ಸೋಂಕು ತುಗುಲಿರುವುದು ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!