ಸಿಂಹದ ಘರ್ಜನೆ ನೋಡಿದ್ದೀರಿ.. ಅದರ ಗೊರಕೆ ಸೌಂಡ್ ಕೇಳಿಲ್ಲಂದ್ರೆ ಒಮ್ಮೆ ಕೇಳಿ..

519

ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಕುಳಿತು ಕುಳಿತು ಸಾಕಾಗಿದೆ. ಹೀಗಾಗಿ ಕಾಲ ಕಳೆಯಲು ಫನ್ನಿ ವಿಡಿಯೋ ನೋಡುವುದು, ಸಿನ್ಮಾ ನೋಡುವುದು, ಟಿಕ್ ಟಾಕ್ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನ ಮಾಡುತ್ತಾ ಟೈಂ ಪಾಸ್ ಮಾಡಲಾಗ್ತಿದೆ. ಹಾಗಾದ್ರೆ ಈ ವಿಡಿಯೊಮ್ಮೆ ನೋಡಿ.

ಮನುಷ್ಯರು ಗೊರಕೆ ಹೊಡೆಯುವುದು ಕಾಮನ್. ಈ ಗೊರಕೆ ಕಾಟಕ್ಕೆ ಅದೆಷ್ಟೋ ಜೋಡಿಗಳು ದೂರ ದೂರ ಆಗಿವೆ. ಅದು ಬೇರೆ ವಿಷ್ಯ ಬಿಡಿ. ಮನುಷ್ಯರಂತೆ ಪ್ರಾಣಿಗಳು ಗೊರಕೆ ಹೊಡೆಯುತ್ತವೆಯಾ ಅಂದ್ರೆ, ಹೌದು ಅನ್ನೋ ಉತ್ತರ ಬರುತ್ತೆ. ಅದಕ್ಕೆ ಕಾಡಿನ ರಾಜ ಸಿಂಹ ಸಾಕ್ಷಿ. ಸಿಂಹ ಹೇಗೆ ಗೊರಕೆ ಹೊಡೆಯುತ್ತೆ ನೋಡಿ..

ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಎಂಬುವವರು ಇದರ ವಿಡಿಯೋವನ್ನ ಟ್ವೀಟರ್ ಗೆ ಹಾಕಿದ್ದು. ಕಾಡಿನಲ್ಲಿರುವ ಸಿಂಹಗಳು ಸಾಮಾನ್ಯವಾಗಿ 18 ರಿಂದ 20 ಗಂಟೆ ಮಲಗುತ್ತವೆ. ಝೂನಲ್ಲಿರುವ ಸಿಂಹಗಳ ನಿದ್ದೆ ಕಡಿಮೆ. ಹೆಣ್ಣು ಸಿಂಹಗಳು ಮರಿಗಳ ರಕ್ಷಣೆಗಾಗಿ 12 ಗಂಟೆ ಮಲಗುತ್ತವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇವರು ಆಗಾಗ ಕಾಡು ಪ್ರಾಣಿಗಳ ವಿಶೇಷ ವಿಡಿಯೋ ಪೋಸ್ಟ್ ಮಾಡ್ತಾ ಮಾಹಿತಿ ನೀಡ್ತಿದ್ದಾರೆ. ಇದಕ್ಕೆ ಹಲವರು ಸಾಕಷ್ಟು ಫನ್ನಿ ಕಾಮೆಂಟ್ಸ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!