ದೇಶದಲ್ಲಿ 5 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ

300

 ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 17,296 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ 4,90,401 ಜನರಲ್ಲಿ ಇದುವರೆಗೂ ಸೋಂಕು ಕಾಣಿಸಿಕೊಂಡಿದೆ. ನಾಳೆಯೊಳಗೆ 5 ಲಕ್ಷ ದಾಟಲಿದೆ. ಇನ್ನು 407 ಜನರ ಸಾವು ದಾಖಲಾಗಿದ್ದು, 15,301ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.

ಇದುವರೆಗೂ 2,85,637 ಜನರು ಗುಣಮುಖರಾಗಿದ್ದು, 1,89,463 ಜನರಲಿಗೆ ಚಿಕಿತ್ಸೆ ನೀಡಲಾಗ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ನಿತ್ಯ 4 ಸಾವಿರಕ್ಕೂ ಹೆಚ್ಚು ಸೋಂಕಿತರು ಹೆಚ್ಚುತ್ತಿದೆ. ಹೀಗಾಗಿ ಕಳೆದೊಂದು ತಿಂಗಳಲ್ಲಿಯೇ ದಿನವೊಂದಕ್ಕೆ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.

ಆರಂಭದಲ್ಲಿ ನೂರು, ಸಾವಿರ ಜನರಲ್ಲಿ ಕಾಣಿಸಿಕೊಳ್ತಿದ್ದ ಸೋಂಕು ಈಗ 17 ಸಾವಿರ ದಾಟುತ್ತಿದೆ ಅಂದ್ರೆ, ಮುಂದಿನ ದಿನಗಳಲ್ಲಿ ಭಾರತ ಬಹುದೊಡ್ಡ ಸಮಸ್ಯೆ ಎದುರಿಸಲಿದೆ ಅನ್ನೋದು ತಿಳಿಯಲಿದೆ. ಹೀಗಾಗಿ ದೇಶದಲ್ಲಿ ಮತ್ತೆ ಲಾಕ್ ಡೌನ್ ವಿಷಯ ಚರ್ಚೆಗೆ ಬರ್ತಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರಗಳು ನಡೆಸ್ತಿರುವ ಪ್ರಯತ್ನಗಳು ಕೈಹಿಡಿಯುತ್ತಿಲ್ಲ. ಆದ್ರಿಂದ ಸಾರ್ವಜನಿಕರು ಸೋಂಕಿನ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!