ಮಹಾರಾಷ್ಟ್ರದಲ್ಲಿ 13 ನಕ್ಸಲರರ ಎನ್ ಕೌಂಟರ್

242

ಪ್ರಜಾಸ್ತ್ರ ಸುದ್ದಿ

ಮುಂಬೈ: ಮಹಾರಾಷ್ಟ್ರದ ಪೊಲೀಸರು 13 ಜನ ನಕ್ಸಲರರನ್ನ ಶುಕ್ರವಾರ ಎನ್ ಕೌಂಟರ್ ಮಾಡಿದ್ದಾರೆ. ಪೂರ್ವ ವಿದರ್ಭದ ಗಡ್ಜಿರೋಲಿಯ ಪೊಟೆಗಾಂವ್ ಮತ್ತಿ ರಜೋಲಿ ನಡುವಿನ ಕಾಡಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಹಳ್ಳಿಯೊಂದರ ಹತ್ತಿರ ಶಿಬಿರ ಮಾಡಿಕೊಂಡಿದ್ದ ನಕ್ಸಲರರ ಮೇಲೆ ಪೊಲೀಸರು ದಾಳಿ ಮಾಡಿ ಹೊಡೆದುರುಳಿಸಿದ್ದಾರೆ. ಶಸ್ತ್ರಾಸ್ತ್ರಗಳು ಸೇರಿದಂತೆ ಇತರೆ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಕಾಡಿನಲ್ಲಿ ನಕ್ಸಲರರು ಇರುವ ಮಾಹಿತಿ ಪಡೆದದ್ಮೇಲೆ ಕಾರ್ಯಾಚರಣೆ ನಡೆಸಿ 13 ಜನರನ್ನ ಎನ್ ಕೌಂಟರ್ ಮಾಡಲಾಗಿದೆ ಎಂದು ಡಿಐಜಿ ಸಂದೀಪ ಪಾಟೀಲ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!