ಕರೋನಾ ವಿರುದ್ಧ ದೇಶದ ತುಂಬಾ ಬೆಳಗಿತು ‘ದೀಪ’ದಲಂಕಾರ

871

ಡೆಡ್ಲಿ ಕರೋನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿ ಇಡೀ ದೇಶ ಒಗ್ಗಟ್ಟಾಗಿದೆ ಎಂದು ಸಾರಲು, ದೀಪ ಬೆಳಗಿಸಿ ಎಂದು ಕರೆ ನೀಡಿದ್ರು. ಮನೆಯಲ್ಲಿರುವ ಎಲ್ಲ ಲೈಟ್ಸ್ ಆಫ್ ಮಾಡಿ ಹಣತೆ, ಮೇಣದ ಬತ್ತಿ, ಟಾರ್ಚ್ ಲೈಟ್ ಹಿಡಿಯುವ ಮೂಲಕ ಅಖಂಡ ಭಾರತ ಒಂದು ಎಂದು ಜಗತ್ತಿಗೆ ಸಾರಿ ಎಂದಿದ್ರು. ಅದರಂತೆ ಎಲ್ಲೆಡೆ ದೀಪಗಳು ಬೆಳಗಿವೆ. ಸಿಂ ಬಿ.ಎಸ್ ಯಡಿಯೂರಪ್ಪ ಆದಿಯಾಗಿ ಎಲ್ಲರೂ ದೀಪ ಬೆಳಗಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬಸ್ಥರಿಂದ ಮೋದಿ ಕರೆಗೆ ಬೆಂಬಲ
ಡಿಸಿಎಂ ಲಕ್ಷ್ಮಣ ಸವದಿ ಕುಟುಂಬದಿಂದ ದೀಪ ಬೆಳಗಲಾಯ್ತು

ದೇಶದ ಮೂಲೆ ಮೂಲೆಯಲ್ಲಿ ದೀಪ ಬೆಳಗಿಸುವ ಮೂಲಕ ಕರೋನಾ ವಿರುದ್ಧದ ಸಮರದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂದು ಸಾರಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯೊಂದಿಗೆ ನಾವೆಲ್ಲ ಇದ್ದೇವೆ ಎಂದು ಸಾರಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗದಲ್ಲಿನ ಕರೋನಾ ಸಮರದ ವಿರುದ್ಧ ಸಾರಿದ ದೀಪದ ಫೋಟೋಗಳು ಇಲ್ಲಿವೆ ನೋಡಿ..

ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ ಶೆಟ್ಟರ್ ಕುಟುಂಬದಿಂದ ದೀಪ ಬೆಳಗಿಸಲಾಯ್ತು

ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧಗಳು, ಟೀಕೆಗಳು ವ್ಯಕ್ತಿವಾಗಿದ್ವು. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜನರು ಟ್ರೋಲ್ ಮಾಡಿದ್ರು. ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಮಂದಿ ವಾಗ್ದಾಳಿ ನಡೆಸಿದ್ರು. ಇದರ ನಡುವೆಯೂ ದೇಶದ ಜನತೆಗೆ ದೀಪ ಬೆಳಗಿಸಿ ಕರೋನಾ ಓಡಿಸಲು ಮುಂದೆ ಬರುವ ಮೂಲಕ ಮಹಾಮಾರಿ ವಿರುದ್ಧ ಸಮರ ಸಾರಿದ್ದಾರೆ.

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕುಟುಂಬದಿಂದ ದೀಪ ಬೆಳಗಲಾಯ್ತು
ಧಾರವಾಡ ಮುರುಘಾಮಠ ಸ್ವಾಮೀಜಿಗಳು ಹಾಗೂ ಶಿಷ್ಯ ಬಳಗ

ಬೆಂಗಳೂರಿನ ರಾಜಾಜಿನಗರದಲ್ಲಿ ಕಾಣಿಸಿಕೊಂಡ ಚಿತ್ರಣ ಇಲ್ಲಿದೆ..

ರಾಜಾಜಿನಗರ, ಬೆಂಗಳೂರು
ಶೇಷಾದ್ರಿಪುರಂ, ಬೆಂಗಳೂರು

ಧಾರವಾಡದಲ್ಲಿಯೂ ದೀಪ ಬೆಳಗಿ ಬೆಂಬಲ ಸೂಚಿಸಲಾಗಿದೆ.ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜಯಾನಂದ ಶೆಟ್ಟಿ ಹಾಗೂ ಅವರ ಕುಟುಂಬದ ಸದಸ್ಯರು ಬೆಳಗುವ ಮೂಲಕ ಪ್ರಧಾನಿ ಮೋದಿ ಕರೆಗೆ ಬೆಂಬಲ ಸೂಚಿಸಿದರು.

ಧಾರವಾಡದ ಜಯನಗರ ನಿವಾಸಿಗಳಾದ ಸವಿತಾ ಪರಂಡಿ ಮತ್ತು ಅವರ ಪುತ್ರ ಸ್ವರೂಪ ದೀಪ ಬೆಳಗುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೊರೊನಾ ವಿರುದ್ಧದ ಕರೆಗೆ ಬೆಂಬಲ ನೀಡಿದರು.

ಶಕ್ತಿ ಕಾಲೋನಿಯ ಶ್ರೀಶೈಲ ಕೋಳಿವಾಡ ಅವರ ಮೊಮ್ಮಗಳು ದೀಪ ಹಿಡಿದು ಕರೋನಾ ವಿರುದ್ಧ ಸಮರ ಸಾರಿದ್ದಾಳೆ.

ಧಾರವಾಡದ ಶ್ರೀನಗರದಲ್ಲಿ ಕಾಲೇಜು ವಿದ್ಯಾರ್ಥಿಗಳ ಬೆಂಬಲ
ಧಾರವಾಡದ ಗಾಂಧಿ ನಗರದಲ್ಲಿ ಶ್ರೀಮತಿ ನಿರ್ಮಲಾ ಕುಟುಂಬಸ್ಥರಿಂದ ದೀಪ ಬೆಳಗಿಸಲಾಯ್ತು
ವಡ್ಡಿನಕೆರೆ ಬಳಿಯ ನಿವಾಸಿಗಳಾದ ಚಂದ್ರಮತಿ ಆರ್.ಕಿತ್ತೂರ, ಶೈಲಾ ಬಿ.ಬಳೊಟಗಿ ದೀಪ ಬೆಳಗಿದ್ರು
ಪ್ರಸಿದ್ಧ ಧಾರವಾಡ ನುಗ್ಗಿಕೇರಿ ದೇವಸ್ಥಾನದಲ್ಲಿ ದೀಪಾಲಂಕರ

ಉತ್ತರ ಕರ್ನಾಟಕ ಭಾಗದ ಖ್ಯಾತ ಬಂಥನಾಳ ಮಠದಲ್ಲಿ ವೃಷಭಲಿಂಗ ಶ್ರೀಗಳು ದೀಪ ಬೆಳಗಿಸಿದ್ರು. ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿರುವ ಮಠ.

ವಿಜಯಪುರದ ಜಿಲ್ಲಾಸ್ಪತ್ರೆಯ ಕ್ವಾಟರ್ಸ್ ನಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸ್ಥಾಯಿ ಸಮಿಸಿ ಅಧ್ಯಕ್ಷರ ಕುಟುಂಬ ದೀಪ ಬೆಳಗಿ ಮೋದಿ ಕರೆಗೆ ಸಾಥ್ ನೀಡಿದ್ದಾರೆ.

ಸಿಂದಗಿ ಪಟ್ಟಣದಲ್ಲಿಯೂ ದೀಪ ಬೆಳಗಿ ಬೆಂಬಲ ಸೂಚಿಸಲಾಗಿದೆ. ನಾಗೂರ್ ಲೇಔಟ್ ನಲ್ಲಿ ಶಿವಲೀಲಾ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಕುಟುಂಬದವರಿಂದ, 3ನೇ ವಾರ್ಡಿ ನಲ್ಲಿ ಮಲ್ಲು ಹಿರೋಳ್ಳಿ, ಶಿವಾನಂದ ಶಹಾಪೂರ ಕಟುಂಬದವರು ದೀಪ ಹಾಗೂ ಟಾರ್ಚ್ ಹಿಡಿಯುವ ಮೂಲಕ ಕರೋನಾ ವಿರುದ್ಧದ ಸಮರದಲ್ಲಿ ಭಾಗವಹಿಸಿದ್ರು.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರ ಕುಟುಂಬ
ಮಲ್ಲು ಹಿರೋಳ್ಳಿ ಅವರ ಕುಟುಂಬಸ್ಥರು
ಶಿವಾನಂದ ಶಹಾಪೂರ ಕುಟುಂಬಸ್ಥರು

ಮಂಡ್ಯ ಜಿಲ್ಲೆ ಬಸರಾಳ ಗ್ರಾಮದಲ್ಲಿನ ಜನರು ಸಹ ದೀಪಿ ಬೆಳಗಿಸಿ ಮೋದಿ ಕರೆಗೆ ಬೆಂಬಲ ಸೂಚಿಸಿದ್ದಾರೆ.

ಕಲಕೇರಿ ಪಟ್ಟಣದಲ್ಲಿ ಈರಣ್ಣ ಝಳಕಿ ಕುಟುಂಬಸ್ಥರು

ಅಥಣಿಯಲ್ಲಿಯೂ ದೀಪ ಬೆಳಗುವ ಮೂಲಕ ಕರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕುಂದಾಪುರದಿಂದ ಶ್ರೀಮತಿ ಬೀನಾ ಗುರುದತ್ತ ಶೈರಣ್ಣಿ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ದೀಪ ಬೆಳಗಿದ ಜನತೆ. ರಮೇಶ ಮೊಯ್ಲಿ, ಆಕಾಶ, ಫಾಯಜ, ಅಖಿಲ್ ಹಾಗೂ ರಿಯಾ ಆಟ್ಸ್ ಇದ್ದಾರೆ.

ಮಡಿಕೇರಿಯಲ್ಲಿ ಶ್ರೀಮತಿ ಜಯಲಕ್ಷ್ಮಿ ಅವರ ಕುಟುಂಬಸ್ಥರಿಂದ ದೀಪ ಬೆಳಗಲಾಯ್ತು. ಮಂಜುಳ, ರೋಜ, ಮೌನ ಇದ್ದಾರೆ.

ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಠಿಯಾಟ್‌ ನವಲಗುಂದ ಠಾಣೆಯಲ್ಲಿ ದೀಪ ಬೆಳಗುವ ಮೂಲಕ ಬೆಂಬಲ ನೀಡಿದರು




Leave a Reply

Your email address will not be published. Required fields are marked *

error: Content is protected !!