ಕರೋನಾ ಕರಿನೆರಳು: ದೇಶದಲ್ಲಿ ಉದ್ಯೋಗ ಕಳೆದೆಕೊಂಡಿದ್ದೆಷ್ಟು ಕೋಟಿ?

364

ನವದೆಹಲಿ: ನೋಟ್ ಬ್ಯಾನ್, ಜಿಎಸ್ ಟಿ ಎಫೆಕ್ಟ್ ನಿಂದಾಗಿ ಆರ್ಥಿಕತೆಯಲ್ಲಿ ಹಿನ್ನೆಡೆ ಅನುಭವಿಸ್ತಿದ್ದ ಭಾರತದಲ್ಲಿ, ಉದ್ಯೋಗ ಕಳೆದುಕೊಳ್ತಿರುವವರ ಸಂಖ್ಯೆ ದಿನೆದಿನೆ ಏರುತ್ತಲೇ ಇತ್ತು. ಇದರ ನಡುವೆ ಕರೋನಾ ಅಟ್ಯಾಕ್ ಆದ್ಮೇಲೆ, ಕೂಲಿ ಕಾರ್ಮಿಕರಿಂದ ಹಿಡಿದು ಎಸಿ ರೂಮಿನಲ್ಲಿ ಕುಳಿತುಕೊಂಡವರು ಸಹ ನಿರುದ್ಯೋಗಿಗಳಾದ್ರು.

ಸಣ್ಣಪುಟ್ಟ ಕೂಲಿಕಾರರು, ಕಾರ್ಮಿಕರು, ಖಾಸಗಿ ವಲಯದ ಉದ್ಯೋಗಿಗಳು ಸೇರಿದಂತೆ ಪೂರ್ಣಾವಧಿ, ಅಲ್ಪಾವಧಿ, ಅರೆಕಾಲಿಕ ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಶೇಕಡ 90ರಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡ್ತಾರೆ. ಹೀಗಿರುವಾಗ ಈಗಿನ ಪರಿಸ್ಥಿತಿಯನ್ನ ನೋಡಿದ್ರೆ 40 ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ವರದಿ ನೀಡಿದೆ.

ಭಾರತ, ನೈಜಿರಿಯಾ, ಬ್ರೆಜಿಲ್ ದೇಶದಲ್ಲಿ ಅಸಂಘಟಿತ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸ್ತಿದ್ದು, ಕೆಲಸ ಬಿಟ್ಟು ಗ್ರಾಮೀಣ ಕಡೆ ಮುಖ ಮಾಡ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಮುಂದುವರೆದ ರಾಷ್ಟ್ರಗಳಲ್ಲಿಯೂ ನಿರುದ್ಯೋಗ ಕಾಡಲಿದೆ. ಫೆಸಿಫಿಕ್ ಭಾಗದಲ್ಲಿ 12.50 ಕೋಟಿ ಜನರು, ಯುರೋಪ್ ನಲ್ಲಿ ಒಂದೂವರೆ ಕೋಟಿ ಹಾಗೂ ಮಧ್ಯಮ ಹಾಗೂ ಮೇಲ್ವರ್ಗದ ಉದ್ಯೋಗದಲ್ಲಿ 10 ಕೋಟಿಗೂ ಹೆಚ್ಚು ಜನರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಮೂಲಕ ಕರೋನಾ ಇಡೀ ವಿಶ್ವಕ್ಕೆ ಎಲ್ಲದರಲ್ಲೂ ಕಂಟಕವಾಗಿದ್ದು ಮಾತ್ರ ಸುಳ್ಳಲ್ಲ.




Leave a Reply

Your email address will not be published. Required fields are marked *

error: Content is protected !!