6 ಸಾವಿರ ದಾಟಿದ ಕೋವಿಡ್ ಕೇಸ್.. ಒಂದೂವರೆ ಲಕ್ಷದತ್ತ ಸೋಂಕಿತರು

283

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 6,259 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 1,45,830ಕ್ಕೆ ಏರಿಕೆಯಾಗಿದೆ. ಇದರಲ್ಲಿ ಇಂದು 6,777 ಜನರು ಡಿಸ್ಚಾರ್ಜ್ ಆಗಿದ್ದು ಇದುವರೆಗೂ 69,272 ಜನರು ಗುಣಮುಖರಾಗಿದ್ದಾರೆ. ಇನ್ನು 73,846 ಪ್ರಕರಣಗಳು ಸಕ್ರಿಯವಾಗಿವೆ.

ಇನ್ನು 110 ಜನರು ಇಂದು ಸಾವನ್ನಪ್ಪುವುದರೊಂದಿಗೆ 2,704ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. 634 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬೆಂ.ನ 2035, ಮೈಸೂರು 662, ಕಲಬುರಗಿ 285, ಬಳ್ಳಾರಿ 284, ಬೆಳಗಾವಿ 263, ದ.ಕ 225, ದಾವಣಗೆರೆ 191, ಧಾರವಾಡ 188, ಹಾಸನ 188, ಚಿಕ್ಕಬಳ್ಳಾಪುರ 171, ಉಡುಪಿ 170, ಕೊಪ್ಪಳ 163, ಹಾವೇರಿ 157, ರಾಯಚೂರು 144, ಬಾಗಲಕೋಟೆ 144, ಮಂಡ್ಯ 126, ಬೀದರ 114, ಗದಗ 96, ಬೆಂ.ಗ್ರಾ 82, ತುಮಕೂರು 78, ಯಾದಗಿರಿ 76, ವಿಜಯಪುರ 71, ರಾಮನಗರ 65, ಚಿಕ್ಕಮಗಳೂರು 63, ಉ.ಕ 57, ಚಾಮರಾಜನಗರ 57, ಕೋಲಾರ 46, ಕೊಡಗು 31, ಶಿವಮೊಗ್ಗ 15, ಚಿತ್ರದುರ್ಗ 12 ಪ್ರಕರಣಗಳು ಕಾಣಿಸಿಕೊಂಡಿವೆ.




Leave a Reply

Your email address will not be published. Required fields are marked *

error: Content is protected !!