ಬೈಕ್ ಅಪಘಾತದಲ್ಲಿ ಸಾರಿಗೆ ನೌಕರ ಸಾವು

595

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ಬೈಕ್ ಅಪಘಾತದಲ್ಲಿ ತಾಲೂಕಿನ ಸಾವಳಗಿ ಗ್ರಾಮದ 39 ವರ್ಷದ ಸಂಜು ಶಿವಬಸು ಮೇಲಿನಕೇರಿ ಎಂಬುವರು ಸಾವನ್ನಪ್ಪಿದ್ದಾರೆ. ಅಥಣಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, 2 ದಿನಗಳ ಹಿಂದೆ ಬೈಕನಲ್ಲಿ ಹೋಗುವಾಗ ನಾಯಿ ಅಡ್ಡ ಬಂದಿದೆ. ಅದನ್ನ ತಪ್ಪಿಸಲು ಹೋಗಿ ಬೈಕ್ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ರು.

ಗಾಯಗೊಂಡಿದ್ದ ಸಂಜು ಅವರನ್ನ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.




Leave a Reply

Your email address will not be published. Required fields are marked *

error: Content is protected !!