ಕೋವಿಡ್ ಸೋಂಕು: ವಿಜಯಪುರದಲ್ಲಿ ವೃದ್ಧೆ ಸಾವು.. 9 ಶಾಲಾ, ಕಾಲೇಜು ಬಂದ್

236

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಮತ್ತೆ ಆರ್ಭಟಿಸುತ್ತಿದೆ. ಕರೋನಾ ಸೋಂಕಿಗೆ 70 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಅಲ್ದೇ ಸೋಂಕು ಕಾಣಿಸಿಕೊಂಡ 9 ಶಾಲಾ, ಕಾಲೇಜುಗಳನ್ನು ಒಂದು ವಾರಗಳ ಕಾಲ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಆ ಶಾಲಾ, ಶಾಲೇಜುಗಳ ವಿವಿರ ಇಲ್ಲಿದೆ..

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 70 ವರ್ಷ ವೃದ್ಧೆ ಮೃತಪಟ್ಟಿದ್ದಾರೆ. ರೋಗಿ ಸಂಖ್ಯೆ 3448344 ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಇವರು ತೀವ್ರ ಉಸಿರಾಟ ತೊಂದರೆ, ಹೊಟ್ಟೆ ನೋವು, ಎಚ್‌ಟಿಎನ್, ಟೈಪ್ ೨ ಡಯಾಬಿಟೀಸ್ ಸಂಬಂಧಿತ ಕಾಯಿಲೆಗಳಿಂದ ಬಳಲಿ, 17 ಜನವರಿ 2022ರಂದು ಗುಲ್ಬರ್ಗಾದಿಂದ ಆಗಮಿಸಿದ್ದ ಇವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಕೋವಿಡ್ ಲಸಿಕೆ ಡೋಸ್-1, ಡೋಸ್-2 ಪಡೆದುಕೊಂಡಿದ್ದರು. ಶಿಷ್ಟಾಚಾರದಂತೆ ಇವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!