ವಿಶ್ವದ 3ನೇ ಅತಿದೊಡ್ಡ ಮೂತ್ರಪಿಂಡ ಚಿಕಿತ್ಸೆ

422

ನವದೆಹಲಿ: ದೆಹಲಿಯ ಆಸ್ಪತ್ರೆಯ ವೈದ್ಯರು ಬರೋಬ್ಬರಿ 7.4 ಕೆಜಿಯ ಮೂತ್ರಪಿಂಡವನ್ನ ಹೊರ ತೆಗೆದಿದ್ದಾರೆ. 56 ವರ್ಷದ ವ್ಯಕ್ತಿಯಿಂದ ಡಾ. ಸಚಿನ ಕಥುರಿಯಾ ಅವರ ಟೀಂ ಚಿಕಿತ್ಸೆ ಮಾಡಿ ಬೃಹತ್ ಮೂತ್ರಪಿಂಡ ಹೊರ ತೆಗೆದಿದೆ.

ಇದು ವಿಶ್ವದ ಮೂರನೇ ಅತಿ ದೊಡ್ಡ ಮೂತ್ರಪಿಂಡವಾಗಿದೆ. ಸಾಮಾನ್ಯವಾಗಿ ಮೂತ್ರಪಿಂಡಗಳು 120 ರಿಂದ 150 ಗ್ರಾಂ ತೂಕ ಹೊಂದಿರುತ್ತೆ. ರೋಗಿಯ ಎಡಭಾಗದಲ್ಲಿದ್ದ ಮೂತ್ರಪಿಂಡ ಚಿಕಿತ್ಸೆ ಮಾಡಿ ಹೊರ ತೆಗೆಯಲಾಗಿದೆ. ಈ ರೀತಿಯ ಸಮಸ್ಯೆ 700ರಿಂದ 1000 ಜನರಲ್ಲಿ ಒಬ್ಬರಿಗೆ ಈ ರೀತಿಯ ಸಮಸ್ಯೆ ಕಾಣಿಸುತ್ತಿದೆ.

ವಿಶ್ವದಾದ್ಯಂತ 12.5 ಮಿಲಿಯನ್ ಜನ ಇಂಥಾ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಮಾತ್ನಾಡಿದ ಡಾ.ಸಚಿನ ಕಥುರಿಯಾ, ದೇಶದಲ್ಲಿ ಇವರೆಗೂ ಇಂಥಾ ದೊಡ್ಡ ಮೂತ್ರಪಿಂಡವನ್ನ ಹೊರತೆಗೆದ ನಿರ್ದೇಶನ ಇಲ್ಲವೆಂದು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!