ಡಿಸೆಂಬರ್ ನಲ್ಲಿ ಬರ್ತಿವೆ ಬಿಗ್ ಚಿತ್ರಗಳು

645

ಸ್ಯಾಂಡಲ್ ವುಡ್ ನಲ್ಲಿ ಡಿಸೆಂಬರ್ ತಿಂಗಳು ಫುಲ್ ಭರ್ಜರಿಯಾಗಿರಲಿದೆ. ಈ ತಿಂಗಳಲ್ಲಿ ಸ್ಟಾರ್ ನಟರ ಹೈ ಬಜೆಟ್ ಮೂವಿಗಳು ಬರ್ತಿವೆ. ಹೀಗಾಗಿ ಸಾಕಷ್ಟು ನಿರೀಕ್ಷೆಗಳಿದ್ದು ಸ್ಟಾರ್ ನಟರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಡಿ ಬಾಸ್ ನಟನೆಯ ಒಡೆಯ ಸಿನ್ಮಾ ಬರ್ತಿದೆ. ಡಿಸೆಂಬರ್ 12ರಂದು ಚಿತ್ರ ರಿಲೀಸ್ ಆಗ್ತಿದೆ. ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಕಿಚ್ಚ ಸುದೀಪ ಹಾಗೂ ಸಲ್ಮಾನ ಖಾನ್ ನಟನೆಯ ದಂಬಾಗ್-3 ಕನ್ನಡದಲ್ಲಿ ಬರ್ತಿದೆ. ಹೀಗಾಗಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ.

ಇನ್ನು ರಿಶಬ್ ಶೆಟ್ಟಿ ನಿರ್ದೇಶನದ ಕಥಾ ಸಂಗಮ ಸಿನ್ಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ. 7 ಕಥೆ, 7 ನಿರ್ದೇಶಕರು, 7 ಜನ ಮ್ಯೂಸಿಕ್ ಡೈರೆಕ್ಟರ್ಸ್, 7 ಜನ ಸಿಜಿಕೆ ವರ್ಕ್ ಟೀಂ ಸೇರಿದಂತೆ ಹೀಗೆ ತುಂಬಾ ವಿಶೇಷತೆಯಿಂದ ಕೂಡಿರುವ ಸಿನ್ಮಾ ಡಿಸೆಂಬರ್ ನಲ್ಲಿ ತೆರೆಗೆ ಬರ್ತಿದೆ.

ನಟ ರಕ್ಷಿತ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರ ರಿಲೀಸ್ ಆಗ್ತಿದೆ. ಈಗಾಗ್ಲೇ ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಚಿತ್ರ ಹೇಗಿರಬಹುದು ಅನ್ನೋ ಕುತೂಹಲವಿದೆ. ಕಿರಿಕ್ ಪಾರ್ಟಿ ನಂತರ ಭಾರೀ ಕುತೂಹಲ ಮೂಡಿಸಿರುವ ಚಿತ್ರವಾಗಿದೆ. ಒಟ್ಟಿನಲ್ಲಿ ಡಿಸೆಂಬರ್ ನಲ್ಲಿ ಸಾಕಷ್ಟು ಹೈ ಬಜೆಟ್ ಸಿನ್ಮಾ ಬರ್ತಿದ್ದು ಸ್ಟಾರ್ ಫೈಟ್ ನಡೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!