ಪಕ್ಕದ ರಾಜ್ಯಕ್ಕೆ ಹೊರಟ ಶ್ರೀಮನ್ನಾರಾಯಣ

368

ಚಂದನವದಲ್ಲಿ ಭರ್ಜರಿಯಾಗಿ ಸೌಂಡ್ ಮಾಡ್ತಿರುವ ಅವನೆ ಶ್ರೀಮನ್ನಾರಾಯಣ ಇಂದು ಪಕ್ಕದ ರಾಜ್ಯದಲ್ಲಿಯೂ ಹವಾ ಸೃಷ್ಟಿಸಲು ಹೊರಟಿದ್ದಾನೆ. ನಟ ರಕ್ಷಿತ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರ ಡಿಸೆಂಬರ್ 27ರಂದು ಕನ್ನಡದಲ್ಲಿ ರಿಲೀಸ್ ಆಗಿತ್ತು. ಇಂದು ತೆಲುಗಿನಲ್ಲಿ ರಿಲೀಸ್ ಆಗ್ತಿದೆ.

ರಕ್ಷಿತ ಶೆಟ್ಟಿಯ ಚಿತ್ರ ಮೊದಲ ಬಾರಿಗೆ ಬಹುಭಾಷೆಯಲ್ಲಿ ರಿಲೀಸ್ ಆಗ್ತಿದೆ. ಆದ್ರೆ, ಏಕಕಾಲದಲ್ಲಿ ಬಿಡುಗಡೆ ಮಾಡುವ ಬದಲು ಒಂದೊಂದು ದಿನ ಒಂದೊಂದು ಭಾಷೆಯಲ್ಲಿ ಬಿಡುಗಡೆಯಾಗ್ತಿದೆ. ಜನವರಿ 1 ತೆಲುಗು, ಜನವರಿ 3 ತಮಿಳು ಹಾಗೂ ಮಲಿಯಾಳಂನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ರಿಲೀಸ್ ಆಗ್ತಿದೆ.

ಇನ್ನು ಕಲೆಕ್ಷನ್ ವಿಚಾರದಲ್ಲಿಯೂ ಭರ್ಜರಿಯಾಗಿ ಸದ್ದು ಮಾಡ್ತಿರುವ ನಾರಾಯಣ, ಕನ್ನಡಿಗರಿಗೆ ಮೋಡಿ ಮಾಡಿದ್ದಾನೆ. 2019ರ ವರ್ಷಾಂತ್ಯಕ್ಕೆ ರಕ್ಷಿತ ಶೆಟ್ಟಿಗೆ ಸಕ್ಸಸ್ ಸಿಗುವ ಮೂಲಕ 3 ವರ್ಷಗಳ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ.




Leave a Reply

Your email address will not be published. Required fields are marked *

error: Content is protected !!