ಚಂದನವನದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಕಥಾ ಸಂಗಮ ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗ್ತಿದೆ. ನಿರ್ದೇಶಕ ರಿಷಬ್ ಶೆಟ್ಟಿ, ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿರುವ ಚಿತ್ರ. ಅಲ್ದೇ, ಇಲ್ಲಿ ಹಲವು ವಿಶೇಷತೆಗಳಿವೆ.
ಕಥಾ ಸಂಗಮಕ್ಕೆ ಏಳು ಜನ ನಿರ್ದೇಶಕರು, ಏಳು ಜನ ಮ್ಯೂಸಿಕ್ ಕಂಪೋಸರ್, ಏಳು ಜನ ಡಿಒಪಿಎಸ್, ಏಳು ಕಥೆಗಳು ಸೇರಿ ಒಂದು ಸಿನಿಮಾ ಆಗಿದೆ. ಹೀಗಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ. ದೊಡ್ಡ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದ್ದು ಇಂದು ರಿಲೀಸ್ ಆಗುವ ಟ್ರೇಲರ್ ನಲ್ಲಿ ಏನಾದ್ರೂ ಚಿತ್ರದ ಸುಳಿವು ನೀಡಿರ್ತಾರ ಕಾದು ನೋಡಬೇಕು.