ಖಡಕ್ ಖಾಕಿಯಲ್ಲೂ ಮಾತೃ ಹೃದಯ: 2.50 ಲಕ್ಷದ ದಿನಸಿ ವಿತರಿಸಿದ ಪಿಎಸ್ಐ

490

ಧಾರವಾಡ: ಕರೋನಾ ಲಾಕ್ ಡೌನ್ ಎಷ್ಟೊಂದು ಜನರ ಬದುಕು ಹೈರಾಣಾಗಿಸಿದೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿ ಬಡವರಿಗೆ, ನಿರ್ಗತಿಕರಿಗೆ, ಹೊರ ರಾಜ್ಯದಿಂದ ಕೂಲಿನಾಲಿ ಮಾಡಲು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ. ಅದೇ ರೀತಿ ಪಿಎಸ್ಐ ಯೊಬ್ಬರು ಬರೋಬ್ಬರಿ 2.50 ಲಕ್ಷ ರೂಪಾಯಿ ಮೌಲ್ಯದ ದಿನಸಿ ವಿತರಣೆ ಮಾಡಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಮಹೇಂದ್ರ ನಾಯಕ ಸ್ವಂತ ಖರ್ಚಿನಲ್ಲಿ 2.50 ಲಕ್ಷ ಮೌಲ್ಯದ ದಿನಸಿಯನ್ನ ಖರೀದಿಸಿ ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚುವ ಮೂಲಕ, ಖಡಕ್ ಖಾಕಿಯೊಳಗೂ ತಾಯಿ ಹೃದಯವಿರುತ್ತೆ ಅನ್ನೋದನ್ನ ತೋರಿಸಿದ್ದಾರೆ.

ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ, ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಹಳ್ಳಿಗೇರಿ, ಯರಿಕೊಪ್ಪ, ನರೇಂದ್ರ, ಕ್ಯಾರಕೊಪ್ಪ, ನಿಗದಿ ಮತ್ತು ಅಮ್ಮಿನಭಾವಿ ಸೇರಿದಂತೆ ಸುಮಾರು 20 ಹಳ್ಳಿಯ ಅತಿ ಬಡವ ಮತ್ತು ಅಸಹಾಯಕ 300 ಕುಟುಂಬಗಳಿಗೆ  ರವೆ, ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.

ವಿಜಯಪುರ ಮೂಲದ ಪಿಎಸ್ಐ

ಇಷ್ಟೊಂದು ಒಳ್ಳೆಯ ಕೆಲಸ ಮಾಡಿರುವ ಪೊಲೀಸ್ ಅಧಿಕಾರಿ ಮಹೇಂದ್ರ ನಾಯಕ ಅವರು, ಗುಮ್ಮಟನಗರಿ ವಿಜಯಪುರ ಜಿಲ್ಲೆಯವರು. ವಿಜಯಪುರ ತಾಲೂಕಿನ ಐನಾಪುರ ತಾಂಡಾ ನಿವಾಸಿಯಾದ ಇವರು ಬಡತನದ ಹಿನ್ನೆಲೆಯಿಂದ ಬಂದವರು. ಆ ಬಡತನದ ನೋವು ಏನು ಅನ್ನೋದು ಸ್ವತಃ ಅನುಭವಿಸಿದ್ರಿಂದ, ಈಗ ಅವರು ಹಸಿದವರಿಗೆ, ಅಸಹಾಯಕರಿಗೆ ಹೆಗಲು ಕೊಟ್ಟಿದ್ದಾರೆ.

ಪಿಎಸ್ಐ ಮಹೇಂದ್ರ ನಾಯಕ

ಬರೀ ತಾವು ಕರ್ತವ್ಯ ನಿರ್ವಹಿಸ್ತಿರುವ ವ್ಯಾಪ್ತಿಯಲ್ಲಿ ಮಾತ್ರವಲ್ಲ, ತಮ್ಮ ಹುಟ್ಟೂರಿನ ಸುತ್ತಲು ಪರೋಪಕಾರಿ ಕೆಲಸ ಮಾಡಿದ್ದಾರೆ. ಐನಾಪುರ ತಾಂಡ ಸೇರಿದಂತೆ ವಿಜಯಪುರ ಹಾಗೂ ಚಡಚಣ ತಾಲೂಕಿನ 15 ಹಳ್ಳಿಯ ಕೂಲಿ ಕಾರ್ಮಿಕರಿಗೆ, ಅಸಹಾಯಕರಿಗೆ, ಬಡವರಿಗೆ ಆಹಾರದ ಕಿಟ್ ವಿತರಿಸಿದ್ದಾರೆ. ಪ್ರತಿ ಕಿಟ್‌ ದಲ್ಲಿ 5 ಕೆಜಿ ರವೆ, 5 ಕೆಜಿ ಅಕ್ಕಿ ಮತ್ತು 2 ಕೆಜಿ ಬೆಲ್ಲ ಸೇರಿ ಅಡುಗೆ ಎಣ್ಣೆ, ಬೆಳೆಕಾಳು ನೀಡಿದ್ದಾರೆ. ಈ ಮೂಲಕ ಪೊಲೀಸ್ರು ಅಂದ್ರೆ ಬರೀ ಕಾನೂನು ಅನ್ನೋದಿಲ್ಲ. ಅವರಲ್ಲಿಯೂ ನೊಂದವರ ಕಣ್ಣೀರು ಒರೆಸುವ ಮನಸ್ಸಿದೆ ಅನ್ನೋದು ತೋರಿಸಿಕೊಟ್ಟಿದ್ದಾರೆ.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರು ಪಿಎಸ್‌ಐ ಮಹೇಂದ್ರ ನಾಯಕ ಅವರ ಕಾರ್ಯ ಮೆಚ್ಚಿ, ಅಮ್ಮಿನಭಾವಿ ಗ್ರಾಮದಲ್ಲಿ ದಿನಸಿ ವಿತರಣಾ ಕಾರ್ಯಕ್ಕೆ ಚಾಲನೆ ನಡಿದ್ರು.




Leave a Reply

Your email address will not be published. Required fields are marked *

error: Content is protected !!