ಅಣ್ಣಾವ್ರ ಹುಟ್ಟು ಹಬ್ಬ: ಅಭಿಮಾನಿಗಳಿಗೆ ದರ್ಶನ ಕೊಡಲಿರುವ ಪವರ್ ಸ್ಟಾರ್

343

ಕನ್ನಡ ಚಿತ್ರ ಸೇರಿದಂತೆ ಭಾರತೀಯ ಸಿನಿಲೋಕದ ಎವರ್ ಗ್ರೀನ್ ನಟ ಡಾ.ರಾಜಕುಮಾರ ಅವರ 92ನೇ ಹುಟ್ಟು ಹಬ್ಬ. ಹೀಗಾಗಿ ವರನಟ ಡಾ.ರಾಜಕುಮಾರ ಅಭಿಮಾನಿಗಳಿಗೆ ಸಂಭ್ರಮ, ಸಂತಸ.

ಪ್ರತಿವರ್ಷ ತಮ್ಮ ಆರಾಧ್ಯದೈವನ ಹುಟ್ಟುಹಬ್ಬವನ್ನ ಕಂಠೀರವ ಸ್ಟುಡಿಯೋ ಅದ್ಧೂರಿಯಾಗಿ ಆಚರಣೆ ಮಾಡ್ತಿದ್ರು. ಆದ್ರೆ, ಈ ಬಾರಿ ಕರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಹೀಗಾಗಿ ಮನೆಯಲ್ಲಿಯೇ ಅವರ ಅಭಿಮಾನಿಗಳು ಸರಳವಾಗಿ ಆಚರಣೆ ಮಾಡಬೇಕಿದೆ.

ಈ ಬಗ್ಗೆ ಮಾತ್ನಾಡಿರುವ ರಾಜಕುಮಾರ ಅವರ ಪುತ್ರ, ಪವರ್ ಸ್ಟಾರ್ ಪುನೀತರಾಜಕುಮಾರ, ನಾವು ಮನೆಯಲ್ಲಿ ಅಪ್ಪಾಜಿ ಫೋಟೋಗೆ ಪೂಜೆ ಮಾಡಿ ಸಿಹಿ ತಿಂದು ಆಚರಣೆ ಮಾಡುತ್ತೇವೆ. ಅದೆ ರೀತಿ ಅಭಿಮಾನಿಗಳು ಸಹ ಮನೆಬಿಟ್ಟು ಆಚೆ ಬರಬೇಡಿ. ಇಂದು ಮಧ್ಯಾಹ್ನ 12.30ಕ್ಕೆ ನಾನು ನಿಮಗೊಂದು ಸಣ್ಣ ಸರ್ ಪ್ರೈಸ್ ಕೊಡ್ತೀನಿ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳಿಗೆ ಸರ್ ಪ್ರೈಸ್ ಕೊಡಲಿದ್ದಾರೆ. ಹೀಗಾಗಿ ಒಂದಿಷ್ಟು ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!