ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಮಳೆ

661

ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಮಳೆಯಾಗಿದೆ. ನಗರದ ವಿವಿಧ ಕಡೆ ಮಳೆಯಾಗುವ ಮೂಲಕ ಮುಂಜಾನೆಯೇ ಒಂದಿಷ್ಟು ತಂಪು ಎರದಿದ್ದಾನೆ ವರುಣದೇವ. ಕಳೆದ ರಾತ್ರಿ ನಗರದ ಕೆಲವು ಕಡೆ ಗುಡುಗು ಸಹಿತ ಮಳೆಯಾಗಿತ್ತು. ಇಂದು ಬೆಳಗ್ಗೆ ಇನ್ನು ಕೆಲವು ಕಡೆ ಮಳೆಯಾಗಿದೆ.

ಯಶವಂತಪುರ, ವಿಜಯನಗರ, ರಾಜಾಜಿನಗರ, ಜಯನಗರ, ಮಲ್ಲೇಶ್ವರಂ, ಬನಶಂಕರಿ, ಮೆಜೆಸ್ಟಿಕ್, ಜೆ.ಪಿ ನಗರ, ಎಂ.ಜಿ ರಸ್ತೆ, ಸದಾಶಿವ ನಗರ, ಕೆಂಗೇರಿ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಇನ್ನು ಎರಡು ದಿನಗಳ ಕಾಲ ಇದೆ ರೀತಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

ಭರ್ಜರಿ ಮಳೆಯಿಂದಾಗಿ ಲಗ್ಗೇರಿ ಬಳಿಯ ರಸ್ತೆಯೊಂದು ಕುಸಿದಿದೆ. ಇದರ ಪರಿಣಾಮ, ಕಾರು, ಬೈಕ್ ಗಳು ಹಳ್ಳಕ್ಕೆ ಬಿದ್ದಿವೆ. ನಂದಿನಿ ಲೇಔಟ್ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!