ಕ್ರಿಕೆಟ್ ದೇವರ ಜನುಮ ದಿನ: ಶುಭಾಶಯಗಳ ಸುರಿಮಳೆ

352

ಕ್ರಿಕೆಟ್ ದುನಿಯಾದ ದೇವರು ಎಂದೇ ಖ್ಯಾತಿ ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ ತಂಡೂಲ್ಕರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 46 ವಸಂತಗಳನ್ನ ಪೂರೈಸಿರುವ ಸಚಿನಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ಸುರಿಸಲಾಗ್ತಿದೆ.

ಕ್ರಿಕೆಟ್ ಅಂಗಳದಲ್ಲಿ ಸಚಿನ ಮಾಡದೆಯಿರುವ ಸಾಧನೆಯಿಲ್ಲ. ಅಷ್ಟೊಂದು ಎತ್ತರಕ್ಕೆ ಏರಿದ ವಾಮನಮೂರ್ತಿ. 24 ವರ್ಷಗಳ ಕಾಲ ಕ್ರಿಕೆಟ್ ದುನಿಯಾದಲ್ಲಿ ಮಿಂಚಿದ ಇವರು, ಏಕದಿನ, ಟೆಸ್ಟ್, ಟಿ-20 ಸೇರಿ 664 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದಾರೆ. 34,357 ರನ್ ಗಳನ್ನ ಬಾರಿಸಿದ್ದಾರೆ.

ಶತಕ, ಅರ್ಧಶತಕ, ಏಕದಿನ ಪಂದ್ಯದಲ್ಲಿ ಡಬಲ್ ಸಂಚ್ಯುರಿ ಬಾರಿಸಿದ ಮೊದಲ ಆಟಗಾರ, ಮ್ಯಾನ್ ಆಫ್ ದಿ ಮ್ಯಾಚ್ ಹೀಗೆ ಹತ್ತು ಹಲವು ಸಾಧನೆ ಮಾಡಿದ ಸಾಧಕನ ಜನುಮ ದಿನಕ್ಕೆ ಎಲ್ಲ ವಲಯದವರು ಶುಭಾಶಯಗಳನ್ನ ತಿಳಿಸ್ತಿದ್ದಾರೆ. ಅವರ ಅಭಿಮಾನಿಗಳು ಸಹ ನೆಚ್ಚಿನ ಆಟಗಾರನಿಗೆ ವಿಶ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!