ಭಾರೀ ಮೊತ್ತಕ್ಕೆ ಮಯಾಂಕ್ ಖರೀದಿಸಿದ ಹೈದ್ರಾಬಾದ್

260

ಪ್ರಜಾಸ್ತ್ರ ಸುದ್ದಿ

ಕೇರಳ: ಕೊಚ್ಚಿಯಲ್ಲಿ ಶುಕ್ರವಾರ ನಡೆದ ಐಪಿಎಲ್ 2023ರ ಹರಾಜಿನಲ್ಲಿ ಕರ್ನಾಟಕದ ಬ್ಯಾಟ್ಸಮನ್ ಮಯಾಂಕ್ ಅಗರ್ವಾಲ್ ಅವರನ್ನು ಸನ್ ರೈಸರ್ಸ್ ಹೈದ್ರಾಬಾದ್ ತಂಡ ಬರೋಬ್ಬರಿ 8.25 ಕೋಟಿ ರೂಪಾಯಿಗೆ ಖರೀದಿಸಿದೆ.

ಇನ್ನು ಇದಕ್ಕೂ ಮೊದಲು ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿಗೆ ಖರೀದಿಸುವ ಮೂಲಕ ವಿದೇಶಿ ಆಟಗಾರನಿಗೂ ದೊಡ್ಡ ಮೊತ್ತವನ್ನೇ ನೀಡಿದೆ. ಇದರೊಂದಿಗೆ 42.25 ಕೋಟಿಯೊಂದಿಗೆ ಎಚ್ ಆರ್ ಎಚ್ ಹರಾಜು ಪ್ರಾರಂಭಿಸಿತು.

ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್ ಈ ಎಲ್ಲ ಆಟಗಾರರನ್ನು ಹೈದ್ರಾಬಾದ್ ಉಳಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!