ಚರಗ ಚೆಲ್ಲಿ ಸಂಭ್ರಮಿಸಿದ ಸಿಂದಗಿ ಜನತೆ

416

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎಳ್ಳ ಅಮವಾಸ್ಯೆ ಬಂತು ಅಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಮನೆ ಮಾಡುತ್ತೆ. ಹೊಲಕ್ಕೆ ಹೋಗದವರು ಸಹ ಅಂದು ತಮ್ಮ ಹೊಲಗಳಿಗೆ ಅಥವ ಬಂಧು, ಬಳಗದ, ಸ್ನೇಹಿತರ ಹೊಲಗಳಿಗೆ ಹೋಗಿ ಚರಗ ಚೆಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತೆ. ಹೀಗಾಗಿ ಎಳ್ಳ ಅಮವಾಸ್ಯೆ ತುಂಬಾ ವಿಶೇಷ.

ತಾಲೂಕಿನಾದ್ಯಂತ ಶುಕ್ರವಾರ ಸಂಭ್ರಮದಿಂದ ಚರಗ ಚೆಲ್ಲಿ ಖುಷಿಯನ್ನು ಹಂಚಿಕೊಳ್ಳಲಾಯಿತು. ಶಿಕ್ಷಕರಾದ ಬಸವರಾಜ ಭೂತಿ ಅವರು ತಮ್ಮ ಬಂಧು, ಬಳಗ, ಸ್ನೇಹಿತರೊಂದಿಗೆ ಕೂಡಿಕೊಂಡು ಹೊಲದಲ್ಲಿ ಪೂಜೆ ಸಲ್ಲಿಸಿದರು. ನಂತರ ತರಹೇವಾರಿ ಅಡುಗೆಯ ರುಚಿಯನ್ನು ಎಲ್ಲರೂ ಕೂಡಿಕೊಂಡು ಸವಿದರು.

ಅಜ್ಜ, ಅಜ್ಜಿಯಿಂದ ಹಿಡಿದು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳವರೆಗೂ ಕೂಡಿಕೊಂಡು ಸಂತಸದಿಂದ ಕಾಲ ಕಳೆದರು. ಈ ವೇಳೆ ಶಿಕ್ಷಕ ಹಾಗೂ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ, ಪತ್ನಿ ಸಂಗೀತಾ, ಶಿಕ್ಷಕರಾದ ಶಿವಾನಂದ ಶಾಪೂರ, ಪತ್ನಿ ವಿಜಯಲಕ್ಷ್ಮಿ, ಉದ್ಯಮಿ ಮಲ್ಲು ಹಿರೋಳ್ಳಿ, ಪತ್ನಿ ರಾಜೇಶ್ವರಿ ಅವರನ್ನು ಶಿಕ್ಷಕರಾದ ಬಸವರಾಜ ಭೂತಿ ಹಾಗೂ ಪತ್ನಿ ರಾಜೇಶ್ವರಿ(ಕವಿತಾ) ಅವರು ಸನ್ಮಾನಿಸಿದರು.

ಇನ್ನು ಕಾಂತಪ್ಪ ಶಿಂಧೆ, ಶಿವು ಶಿಂಧೆ, ಬಲವಂತರಾಯ ಭೂತಿ, ಶಿಕ್ಷಕರಾದ ಯಲಗುರೇಶ ದಳವಾಯಿ, ಲಕ್ಷ್ಮಣ ಹಿಪ್ಪರಗಿ, ಸಂಗಮ್ಮಾ ಭೂತಿ, ಲಕ್ಷ್ಮಿಬಾಯಿ ಭೂತಿ, ಮೀನಾಕ್ಷಿ ಶಿಂಧೆ, ಲಕ್ಷ್ಮಿ ಶಿಂಧೆ, ಜಯಲಕ್ಷ್ಮಿ ಹಿರೋಳ್ಳಿ, ಕಾಶಿಬಾಯಿ ಹಿರೋಳ್ಳಿ, ಸುದೀಪ, ಗೌರಿ, ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!