ಬೆಂಗಳೂರಿನ ಜೋಡಿ ಹುಬ್ಬಳ್ಳಿಯಲ್ಲಿ ಸೂಸೈಡ್

180

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಬೆಂಗಳೂರಿನಿಂದ ಓಡಿ ಬಂದ ಜೋಡಿಯೊಂದು ಆಟೋ ಡ್ರೈವರ್ ವೊಬ್ಬರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಲೋಕೇಶ್ ಹಾಗೂ ಶಾಂತಿ ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಬಂದಿದ್ದ ಜೋಡಿ ಆಟೋದಲ್ಲಿ ನಗರವನ್ನು ಸುತ್ತಾಡಿದೆ. ಆಟೋ ಚಾಲಕನನ್ನು ಪರಿಚಯ ಮಾಡಿಸಿಕೊಂಡು ಅವನಿಂದ ಊಟ ತರೆಸಿಕೊಂಡಿದೆ. ಅಲ್ಲದೇ ಅವರ ಮಾತನ್ನು ನಂಬಿ ಅವರನ್ನು ಮೂರಾರ್ಜಿ ನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿ ಎಂದು ಹೇಳಿ ಬೇರೆ ಬಾಡಿಗೆದಾರರನ್ನು ಬಿಡಲು ಹೋಗಿದ್ದಾನೆ.

ನಂತರ ಮನೆಗೆ ಬಂದು ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಮೃತ ಲೋಕೇಶ್ ಹಾಗೂ ಶಾಂತಿ ಯುವ ಜೋಡಿಯೇನು ಅಲ್ಲ. ಆಕೆ ಅದಾಗಲೇ ಮೂರು ಮದುವೆ ಮಾಡಿಕೊಂಡಿದ್ದಳಂತೆ. ಅದು ಸಾಲದು ಅಂತಾ ಸಹೋದರಿಯ ಗಂಡ ಲೋಕೇಶ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಜೋಡಿ ಹುಬ್ಬಳ್ಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದೆ. ಅವರನ್ನು ನಂಬಿ ಮನೆಯಲ್ಲಿ ಆಶ್ರಯ ನೀಡಿದ ಆಟೋ ಚಾಲಕ ಪಜೀತಿಗೆ ಸಿಕ್ಕಿಬಿದ್ದಿದ್ದಾನೆ.




Leave a Reply

Your email address will not be published. Required fields are marked *

error: Content is protected !!