ಸಿಲಿಕಾನ್ ಸಿಟಿಯಲ್ಲಿ 3 ಕೋಟಿಗೂ ಹೆಚ್ಚು ದಂಡ ವಸೂಲಿ

235

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ಆರ್ಭಟ ಜೋರಾಗ್ತಿದ್ದಂತೆ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿತು. ಮೊದಲು 14 ದಿನ ಟಫ್ ರೂಲ್ಸ್ ಹೆಸರಿನಲ್ಲಿ ಬಂದ್ ಮಾಡಿತು. ಇದೀಗ ಮೇ 24ರ ತನಕ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗಿದೆ.

ಏಪ್ರಿಲ್ 1ರಿಂದ ಮೇ 14ರ ತನಕ ಬೆಂಗಳೂರು ಪೊಲೀಸರು ವಸೂಲಿ ಮಾಡಿದ ದಂಡ ಬರೋಬ್ಬರಿ 3 ಕೋಟಿ 27 ಲಕ್ಷದ 79 ಸಾವಿರದ 827 ರೂಪಾಯಿ ಆಗಿದೆ. ಈ ಮೂಲಕ ಕರೋನಾ ರೂಲ್ಸ್ ಬ್ರೇಕ್ ಮಾಡಿದವರಿಂದ ಭಾರೀ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು ಪೂರ್ವ ವಿಭಾಗ, ಆಗ್ನೇಯ ವಿಭಾಗ, ದಕ್ಷಿಣ ವಿಭಾಗ, ಪಶ್ಚಿಮ ವಿಭಾಗ, ಈಶಾನ್ಯ ವಿಭಾಗ, ಕೇಂದ್ರ ವಿಭಾಗ, ಉತ್ತರ ವಿಭಾಗ, ವೈಟ್ ಫೀಲ್ಡ್ ವಿಭಾಗ ಸೇರಿದಂತೆ 8 ಒಲಯಗಳಿಂದ ಇದುವರೆಗೂ 3,27,79,827 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!