ಅಪ್ಪು 2ನೇ ವರ್ಷದ ಪುಣ್ಯಸ್ಮರಣೆ

146

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ನಿಧನರಾಗಿ ಇಂದಿಗೆ 2 ವರ್ಷ ತುಂಬಿತು. ಹೀಗಾಗಿ ಅವರ ಸಮಾಧಿಗೆ ತೆರೆಳಿದ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಮಕ್ಕಳು, ಸಹೋದರ ರಾಘವೇಂದ್ರ ರಾಜಕುಮಾರ್, ಅಕ್ಕಂದಿರಾದ ಪೂರ್ಣಿಮಾ, ಲಕ್ಷ್ಮಿ, ಅಣ್ಣನ ಮಕ್ಕಳಾದ ವಿನಯ್ ರಾಜಕುಮಾರ್, ಯುವ ರಾಜಕುಮಾರ್ ಸೇರಿ ಬಂಧು ಬಳಗದವರು ಭಾಗವಹಿಸಿದ್ದರು.

ಇನ್ನು ಬೆಳಗ್ಗೆಯಿಂದ ಅಭಿಮಾನಿಗಳು ಕಂಠೀರ ಸ್ಟುಡಿಯೋ ಭೇಟಿಗೆ ನೀಡಿ ಪುನೀತ್ ದರ್ಶನ ಪಡೆಯುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ, ಪಟ್ಟಣ, ನಗರ, ತಾಲೂಕುಗಳಲ್ಲಿ ಪುನೀತ್ ನೆನಪಿನಲ್ಲಿ ನಾನಾ ರೀತಿಯ ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!