ಶೇ.95ರಷ್ಟು ಯುವಜನತೆ ಆನ್ಲೈನ್ ದಾಸರು!

155

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಇವತ್ತಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಗೀಳು ಎಷ್ಟಾಗಿದೆ ಅಂದರೆ ಹೆತ್ತವರ ಮೇಲೆ ಹಲ್ಲೆ ಮಾಡುವುದು, ಕೊಲೆ ಮಾಡುವುದು, ತಾವೇ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಫೇಸ್ ಬುಕ್, ವಾಟ್ಸಪ್, ಇನ್ಸ್ ಟಾಗ್ರಾಮ್, ಯುಟ್ಯೂಬ್ ಗಳಲ್ಲಿ ಮುಳುಗಿ ತಮ್ಮ ಮೌಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕೆಲ ವರದಿ ಪ್ರಕಾರ ಶೇಕಡ 95ರಷ್ಟು ಯುವ ಜನತೆ ಆನ್ಲೈನ್ ನಲ್ಲಿಯೇ ತಮ್ಮ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದೆ.

ಶೇಕಡ 45ರಷ್ಟು ಹದಿಹರೆಯದವರು ನಿರಂತರವಾಗಿ ಆನ್ಲೈನ್ ನಲ್ಲಿ ಇರುತ್ತಾರಂತೆ. ಇದರಿಂದಾಗಿ ಅವರ ಬದುಕಿನ ಮೇಲೆ ಎಷ್ಟೊಂದು ದೊಡ್ಡ ಹೊಡೆತ ಬೀಳುತ್ತಿದೆ ಅನ್ನೋದೆ ತಿಳಿಯದೆ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಪೋಷಕರು ಇದರ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಬರುವ ಲೈಕ್ಸ್, ಕಾಮೆಂಟ್ಸ್ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದು, ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನೋ ಕನಿಷ್ಠ ಸಾಮಾನ್ಯ ಜ್ಞಾನ ಸಹ ಇಲ್ಲ. ಪೋಷಕರು ಬೈಯ್ದು ಮೊಬೈಲ್ ಕಸೆದುಕೊಂಡಾಗ ಮೆದಳು ನ್ಯೂರೋಟ್ರಾನ್ಸ್ಮಿಟರ್ ಡೋಪಮೈನ್ ಬಿಡುಗಡೆ ಮಾಡುತ್ತೆ. ಇದರಿಂದ ಅವರು ಖಿನ್ನತೆಗೆ ಒಳಗಾಗುತ್ತಾರೆ. ಈ ಆನ್ಲೈನ್ ಗುಂಗಿನಿಂದ ಮಕ್ಕಳ ಬಾಲ್ಯ, ಯವ್ವನ ಹಾಳು ಮಾಡಿಕೊಳ್ಳದೆ ಅವರ ಜೀವನದತ್ತ ಗಮನ ಹರಿಸುವಂತೆ ಹೆತ್ತವರು ನಿತ್ಯ ಒಂದು ಗಂಟೆ ಅವರಿಗೆ ತಿಳುವಳಿಕೆ ಹೇಳಿ ನಿಧಾನವಾಗಿ ಅದರಿಂದ ಹೊರಗೆ ಕರೆದುಕೊಂಡು ಬರಬೇಕು ಎಂದು ತಜ್ಞರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!