ಮೊಬೈಲ್ ಹುಚ್ಚು ಇಷ್ಟೊಂದು ರೋಗಕ್ಕೆ ಆಹ್ವಾನ..!

230

ಪ್ರಜಾಸ್ತ್ರ ಲೈಫ್ ಸ್ಟೈಲ್

ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಮನುಷ್ಯ ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ. ಅದರಲ್ಲೂ ಯುವ ಜನತೆ ಬದುಕನ್ನು ಪ್ರೀತಿಸುವುದನ್ನೇ ಮರೆತಿದೆ. ಕಾರಣ ಮೊಬೈಲ್ ಗೆ ಶರಣಾಗಿರುವುದು. ಅತಿಯಾದ ಮೊಬೈಲ್ ಬಳಕೆ ಜೀವಕ್ಕೆ ಆಪತ್ತು ತರುತ್ತೆ ಎಂದು ಮನಃಶಾಸ್ತ್ರರು ಹೇಳುತ್ತಿದ್ದಾರೆ.

ಒಂದು ದಿನದಲ್ಲಿ 5-6 ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಕೆ ಮಾಡುವುದರಿಂದ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು ಎನ್ನುತ್ತಿದ್ದಾರೆ. ಶೇಕಡ 70ರಷ್ಟು ಯುವಕ, ಯುವತಿಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಏನೆಲ್ಲ ಸಮಸ್ಯೆ ಆಗುತ್ತೆ?

ಸಕ್ಕರೆ ಖಾಯಿಲೆ

ಫರ್ಟಿಲಿಟಿ ಸಮಸ್ಯೆ(ಸಂತಾನೋತ್ಪತ್ತಿ ತೊಂದರೆ)

ಸ್ಥೂಲಕಾಯ

ಯುವತಿಯರಲ್ಲಿ ಪಾಲಿಸಿಸ್ಟಿಕ್ ಓವರಿಯನ್ (ಅನಿಯಮಿತ ಮುಟ್ಟು) ರೋಗ

ಒಂದೇ ಚಟುವಟಿಕೆಗೆ ಮೆದುಳನ್ನು ಅತಿಯಾಗಿ ಬಳಸುವುದರಿಂದ ಇತರೆ ಅಂಗಗಳ ಮೇಲೆ ಪರಿಣಾಮವಾಗಲಿದೆ

ಮಾನಸಿಕ ಸಮಸ್ಯೆಗಳೇನು?

ಮಾನಸಿಕ ಒತ್ತಡದಿಂದ ಕ್ಷುಲ್ಲಕ ಕಾರಣಕ್ಕೆ ಜಗಳ

ಒತ್ತಡ ನಿಭಾಯಿಸಲು ಆಗದೆ ಇರುವುದು

ದೇಹ ರಕ್ಷಿಸುವ ಹಾರ್ಮೋನ್ ಗಳ ಪರಿಣಾಮ

ಚಟುವಟಕೆ ಬದಲು ಜಡತ್ವದಿಂದ ಕೂಡಿರುವುದು

ಹೀಗೆ ಮೊಬೈಲ್ ಬಳಕೆಯನ್ನು ಚಟವಾಗಿ ಮಾಡಿಕೊಂಡವರಿಗೆ ಆಗುವ ತೊಂದರೆಗಳು. ಅವಶ್ಯವಿದ್ದಾಗ, ಒಂದು ನಿಗದಿತ ಸಮಯದಲ್ಲಿ ಕೆಲ ಹೊತ್ತು ಮಾತ್ರ ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯಪೂರ್ಣ ಜೀವನ ಶೈಲಿ ಪಡೆಯಬಹುದು. ಇಲ್ಲವಾದರೆ ಬದುಕಿನ ಅತ್ಯಅಮೂಲ್ಯ ಸಮಯ ಕಳೆದು ಹೋಗಲಿದೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!