ಅಕ್ರಮ ಮದ್ಯ ಮಾರಾಟ: 65 ಬಾಕ್ಸ್ ಮದ್ಯ ವಶ

404

ಮಂಡ್ಯ: ಕರೋನಾ ಲಾಕ್ ಡೌನ್ ಇರೋದ್ರಿಂದ ಮದ್ಯದ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಆದ್ರೆ, ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

1 ಸಾವಿರ ರೂಪಾಯಿ ಮೌಲ್ಯದ ಮ್ಯಾನ್ಸನ್ ಹೌಸ್ ಬ್ರಾಂಡಿಯು 3, 500, 2 ಸಾವಿರ ಬೆಲೆಯ ಟೀಚರ್ಸ್ ಮತ್ತು  100 ಪೇಪರ್ಸ್ ವಿಸ್ಕಿಯು 6 ಸಾವಿರ ಹಾಗೂ ಒಂದು ಕ್ವಾಟರ್ ರಾಜಾ ವಿಸ್ಕಿಯು 500 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಹೀಗಾಗಿ ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ 65 ಬಾಕ್ಸ್ ಅಕ್ರಮ ಮದ್ಯ ವಶವಾಗಿರುವುದು ಅಕ್ರಮ ದಂಧೆಗೆ ಕೈಗನ್ನಡಿಯಂತಿದೆ.

ಲಿಕ್ಕರ್ ಶಾಪ್ ಗಳಿಗೆ ಅಧಿಕೃತವಾಗಿ ಬೀಗಮುದ್ರೆ ಹಾಕಿದ್ದರೂ ಹಿಂಬಾಗಿಲಿನ ಮೂಲಕ ಕಳ್ಳ ವ್ಯವಹಾರ ನಡೆಸಿರುವುದು ಕಂಡು ಬಂದಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಅಬಕಾರಿ ಅಧಿಕಾರಿ ಶಿವಪ್ರಸಾದ್ ಎಚ್ಚರಿಸಿದರು. ಇನ್ನು ಮದ್ಯದಂಗಡಿಗಳು ಹಾಗೂ ಬಾರ್ ಗಳ ಪರಿಶೀಲನೆ ವೇಳೆ ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ, ಅಬಕಾರಿ ನಿರೀಕ್ಷಕಿ ಭವ್ಯ, ಸಬ್ ಇನ್ಸಪೆಕ್ಟರ್ ಪುಟ್ಟಸ್ವಾಮಿ, ಅಣ್ಣಪ್ಪಸ್ವಾಮಿ, ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪುರಸಭೆ ಮುಖ್ಯಾಧಿಕಾರಿ ಸತೀಶಕುಮಾರ ಹಾಗೂ ಸಿಬ್ಬಂದಿ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!