ಸಿಂದಗಿ ಕಣದಲ್ಲಿ 11 ಅಭ್ಯರ್ಥಿಗಳು, ಅಂತಿಮವಾಗಿ ಉಳಿಯೋದ್ಯಾರು?

210

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ನಾಮಪತ್ರ ಪರಿಶೀಲನೆ ನಡೆಯಿತು. ಇದರಲ್ಲಿ ಎಲ್ಲವೂ ಸ್ವಿಕೃತಗೊಂಡಿವೆ. ಈ ಮೂಲಕ ತಿರಸ್ಕಾರಗೊಳ್ಳುವ ಆತಂಕ ಇದ್ದವರಿಗೆ ನಿರಾಳವಾಗಿದೆ.

ರಮೇಶ ಭೂಸನೂರ-ಬಿಜೆಪಿ, ಅಶೋಕ ಮನಗೂಳಿ-ಕಾಂಗ್ರೆಸ್, ವಿಶಾಲಾಕ್ಷಿ ಪಾಟೀಲ-ಜೆಡಿಎಸ್, ದಸ್ತಗೀರಸಾಬ ಮಕಾಂದಾರ-ಬಿಎಸ್ಪಿ, ಪುಂಡಲೀಕ ಬಿರಾದಾರ-ಕೆಆರ್ ಎಸ್, ಮುರೆಗೆಪ್ಪ ರದ್ದೇವಾಡಗಿ-ಆಪ್, ಅಕ್ಕಬರ ಖಾಜಾಸಾಬ ಮುಲ್ಲಾ-ಪಕ್ಷೇತರ, ದೀಪಿಕಾ.ಎಸ್-ಪಕ್ಷೇತರ, ಜೀಲಾನಿ ಮುಲ್ಲಾ-ಪಕ್ಷೇತರ, ಮೊಹಮ್ಮದ ನಾಯ್ಕೋಡಿ-ಪಕ್ಷೇತರ, ಮೀರಮಜಾ ಚೌದರಿ-ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಏಪ್ರಿಲ್ 24, ಸೋಮವಾರ ನಾಮಪತ್ರ ವಾಪಸ್ ಪಡೆಯುವ ದಿನವಾಗಿದೆ. 11 ಅಭ್ಯರ್ಥಿಗಳಲ್ಲಿ ಯಾರು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಾರೆ, ಯಾರು ಉಳಿದುಕೊಳ್ಳುತ್ತಾರೆ ಅನ್ನೋ ಕುತೂಹಲ ಕ್ಷೇತ್ರದ ಮತದಾರರಲ್ಲಿದೆ.




Leave a Reply

Your email address will not be published. Required fields are marked *

error: Content is protected !!