ಉಪ‌ ಚುನಾವಣೆ ಬಳಿಕ ಕೋವಿಡ್ ಕಠಿಣ ಕ್ರಮ ಯಾಕೆ?

230

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 2ನೇ ಅಲೆ ಎದ್ದಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಅದು ಉಪ ಚುನಾವಣೆ ಬಳಿಕವಂತೆ. ಅಲ್ಲಿಯ ತನಕ ಒಂದಿಷ್ಟು ಬೇಕು ಬೇಡದ ನಿಯಮಗಳನ್ನ ಮಾಡ್ತಿದೆ.

ಏಪ್ರಿಲ್ 17ರಂದು 1ಲೋಕಸಭೆ ಹಾಗೂ 2 ವಿಧಾನಸಭೆಗೆ ಉಪ ಚುನಾವಣೆ ಮತದಾನ ನಡೆಯುತ್ತಿದೆ. ಇದು ಮುಗಿದ ಮೇಲೆ ರಾಜ್ಯದಲ್ಲಿ ಇನ್ನು ಕಠಿಣ ಕೋವಿಡ್ ನಿಯಮ ತರುವುದು ಎಂದು ಹೇಳ್ತಿರುವ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಚುನಾವಣೆ ಪ್ರಚಾರ, ರಾಜಕೀಯ ಸಭೆ, ಸಮಾರಂಭ, ಸಿನಿಮಾ‌ದವರು ಹೇಳಿರುವ ಕಾರಣಕ್ಕೆ ನಿಯಮ ಸಡಿಲಿಸುವ ಸರ್ಕಾರ ಜನಸಾಮಾನ್ಯರ ಮೇಲೆ‌ ದಬ್ಬಾಳಿಕೆ ಮಾಡಲು ಮುಂದಾಗಿದೆ. ರೂಲ್ಸ್ ಮಾಡುವ ಜನಪ್ರತಿನಿಧಿಗಳೆ ರೂಲ್ಸ್ ಬ್ರೇಕ್ ಮಾಡ್ತಾರೆ. ಜನಸಾಮಾನ್ಯರು ಮಾಸ್ಕ್ ಹಾಕ್ಲಿಲ್ಲಂದ್ರೆ ಸಾವಿರಾರು ದಂಡ ವಸೂಲಿಗೆ, ಜೈಲಿಗೆ ಕರೆದುಕೊಂಡು ಹೋಗುವ ದಬ್ಬಾಳಿಕೆ ಮಾಡುತ್ತೆ. ಈ ಬಗ್ಗೆ ಜನರು ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!