ಕೋವಿಡ್ 3ನೇ ಅಲೆ ಎಚ್ಚರಿಕೆ.. ಮಕ್ಕಳ ಬಗ್ಗೆ ಇರಲಿ ಹೆಚ್ಚು ಕಾಳಜಿ..

306

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ 2ನೇ ಅಲೆಗೆ ಇಡೀ ದೇಶ ಸಂಪೂರ್ಣವಾಗಿ ಕಂಗಾಲಾಗಿ ಹೋಗಿದೆ. ಎಲ್ಲಿ ನೋಡಿದ್ರು ಸೋಂಕಿತರು, ಮೃತದೇಹಗಳು.. ಕುಟುಂಬಸ್ಥರ ಆಕ್ರಂದನ, ಸಿಟ್ಟು, ಹತಾಶೆ. ಮೊದಲ ಅಲೆಯಿಂದ ಸರ್ಕಾರಗಳು ಎಚ್ಚೆತ್ತುಕೊಳ್ಳದ ಪರಿಣಾಮ 2ನೇ ಅಲೆ ಎದ್ದಿದೆ. ಇನ್ನು ತಜ್ಞರು 3ನೇ ಅಲೆಯ ಎಚ್ಚರಿಕೆ ನೀಡಿದ್ದಾರೆ.

ಹೌದು, ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು ಹೆಚ್ಚು ಗುರಿಯಾದರು. 2ನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವ ಜನತೆ ಸಿಲುಕಿಕೊಂಡಿದೆ. ಇನ್ನು ಮುಂಬರುವ 3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎಂದು ಎಚ್ಚರಿಕೆ ನೀಡಲಾಗಿದೆ. ಶಿಶುಗಳಿಂದ ಹಿಡಿದ 16 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳಲಿದೆಯಂತೆ. ಈಗಾಗ್ಲೇ ಕೆಲವು ಕಡೆ ಮಕ್ಕಳು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ.

ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳದಂತೆ ಮಾಡಲು ಇದುವರೆಗೂ ಯಾವುದೇ ಲಸಿಕೆ ಇಲ್ಲ. ಹೀಗಾಗಿ ಹೆತ್ತವರು, ಕುಟುಂಬಸ್ಥರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇದರ ಜೊತೆಗೆ ಹಿರಿಯರ ಬಗ್ಗೆಯೂ ಕಾಳಜಿ ವಹಿಸಬೇಕಿದೆ.

ಮಕ್ಕಳನ್ನು ಹೊರಗೆ ಬಿಡಬೇಡಿ.

ಅತೀ ಹೆಚ್ಚು ಜನರು ಸೇರುವ ಜಾಗಕ್ಕೆ ಮಕ್ಕಳನ್ನ ಕರೆದುಕೊಂಡು ಹೋಗಬೇಡಿ.

ಮಕ್ಕಳನ್ನ ಅವರಿವರ ಮನೆಗಳಿಗೆ ಕಳುಹಿಸಬೇಡಿ.

ಮನೆಯಲ್ಲಿ ಯಾರಿಗಾದರೂ ಕಾಯಿಲೆ ಇದ್ರೆ, ಅವರಿಂದ ದೂರವಿರಿಸಿ.

ಮಕ್ಕಳ ಕೈಗಳನ್ನ ಆಗಾಗ ತೊಳೆದುಕೊಳ್ಳುವಂತೆ ಹೇಳಿ. ತುಂಬಾ ಚಿಕ್ಕ ಮಕ್ಕಳಿದ್ದರೆ ಕುಟುಂಬಸ್ಥರು ಕೈ ತೊಳೆಯುವುದು, ತಿನಿಸುವುದು ಮಾಡಬೇಕು.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೋಷಕಾಂಶ ಆಹಾರ ನೀಡಿ.

ಸಭೆ, ಸಮಾರಂಭ, ಶುಭ ಸಮಾರಂಭಗಳಿಗೆ, ಧಾರ್ಮಿಕ ಕಾರ್ಮಿಕಗಳಿಗೆ ಹೋಗುವುದನ್ನ ನಿಲ್ಲಿಸುವುದು ಅತಿ ಅವಶ್ಯಕ.

ಹೀಗೆ ಮಕ್ಕಳ ಬಗ್ಗೆ ಸದಾ ಜಾಗರುಕತೆಯಿಂದ ಇರಿ. ಅವರ ಆರೋಗ್ಯದ ಕಾಳಜಿಯ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಇಡೀ ಕುಟುಂಬದ ದೃಷ್ಟಿಯಿಂದ ಒಳ್ಳೆಯದು. ಯಾಕಂದ್ರೆ, ಕರೋನಾ ಸಾಂಕ್ರಾಮಿಕ ಕಾಯಿಲೆ ಆಗಿದೆ.




Leave a Reply

Your email address will not be published. Required fields are marked *

error: Content is protected !!