ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಜನ ಬಲಿ

307

ವಿರುಧ್ ನಗರ್: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟವಾದ ಪರಿಣಾಮ 6 ಜನ ಮಹಿಳೆಯರು ಸೇರಿದಂತೆ 8 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಅನಾಹುತಾದಲ್ಲಿ 10 ಜನಕ್ಕೆ ಗಾಯಗಳಾಗಿವೆ.

ವಿರುಧ್ ನಗರ್ ಜಿಲ್ಲೆ ವೆಂಬಿಕೊಟ್ಟೈ ಸಮೀಪದ ಚಿಪ್ಪಿಪ್ರಾರೈನಲ್ಲಿ ಪಟಾಕಿ ಕಾರ್ಖಾನೆ ಸ್ಫೋಟಗೊಂಡಿದೆ. ಇದ್ರಿಂದಾಗಿ 8 ಜನ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ 11 ಜನರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಇನ್ನು ಅನಧಿಕೃತವಾಗಿ ಪಟಾಕಿಗಳನ್ನ ತಯಾರಿಸಲಾಗ್ತಿತ್ತು ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಶ್ರೀ ರಾಜಮ್ಮಳ್ ಪಟಾಕಿ ತಯಾರಿಕ ಘಟಕದ ಮಾಲೀಕ ಆರ್.ಗಣೇಶನ್ ವಿರುದ್ಧ ಕೇಸ್ ದಾಖಲಾಗಿದ್ದು, ತನಿಖೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!