ಸಿಂಗರ್ ಕನ್ನಿಕಾ ವಿರುದ್ಧ ಎಫ್ಐಆರ್

346

ಲಖ್ನೋ: ಬಾಲಿವುಡ್ ಸಿಂಗರ್ ಕನ್ನಿಕಾ ಕಪೂರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕನ್ನಿಕಾಗೆ ಕರೋನಾ ಸೋಂಕು ಇರೋದು ಪತ್ತೆಯಾಗಿದ್ರೂ, ಪ್ರತ್ಯೇಕವಾಗಿ ಇರದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಹೀಗಾಗಿ ಸರೋಜಿನಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಐಪಿಸಿ ಸೆಕ್ಷನ್ 188, 269 ಹಾಗೂ 270ರ ಅಡಿಯಲ್ಲಿ ಗಾಯಕಿ ಕನ್ನಿಕಾ ವಿರುದ್ಧ ಕೇಸ್ ಮಾಡಲಾಗಿದೆ. ಮಾರ್ಚ್ 14 ರಂದು ಲಂಡನ್ ನಿಂದ ಬಂದ ಕನ್ನಿಕಾ ಕರೋನಾ ಸೋಂಕಿಗೆ ಒಳಗಾಗಿದ್ರು. ಆಗ ಅವರು ಪ್ರತ್ಯೇಕವಾಗಿ ಇರದೆ, ಇತರರ ಬಗ್ಗೆ ಕಾಳಜಿ ವಹಿಸದೆ ಕಾರ್ಯಕ್ರಮ ಆಯೋಜಿಸಿದ್ರು. ಹೀಗಾಗಿ ಉತ್ತರ ಪ್ರದೇಶ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಲಾಗಿದೆ.

ಈಗಾಗ್ಲೇ ರಾಷ್ಟ್ರಪತಿ ರಾಮನಾಥ ಕೋವಿಂದ ಸೇರಿದಂತೆ ಅನೇಕ ಗಣ್ಯರು ಕರೋನಾದಿಂದ ಭೀತಿಗೊಂಡಿದ್ದಾರೆ. ಕನ್ನಿಕಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ರಂತೆ. ಹೀಗಾಗಿ ಅವರೆಲ್ಲ ಆರೋಗ್ಯ ತಪಾಸಣೆ ಮಾಡಿಸಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!