ರಾಜ್ಯ, ರಾಷ್ಟ್ರದಲ್ಲಿ ರಾಜೀನಾಮೆ ಪರ್ವ!

556

ಬೆಂಗಳೂರು: ದೇಶ ಮತ್ತು ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರುವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಬಿಜೆಪಿ ಭರ್ಜರಿ ಬೆಳೆ ತೆಗೆದಿರುವುದ್ರಿಂದ ಕಂಗಾಲಾಗಿರುವ ಪ್ರತಿಪಕ್ಷಗಳ ನಾಯಕರ ಸರಣಿ ರಾಜೀನಾಮೆ ನಡೆಯಲಿದೆ ಎನ್ನಲಾಗ್ತಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಕಾಂಗ್ರೆಸ್ ನ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಯುತ್ತಿದ್ದು, ತಾಯಿ ಸೋನಿಯಾ ಗಾಂಧಿ ಬೇಡ ಎಂದಿದ್ದಾರೆ ಅನ್ನೋದು ತಿಳಿದು ಬಂದಿದೆ.

ಲೋಕ ಫಲಿತಾಂಶದಿಂದ ಅಸಮಾಧಾನಗೊಂಡಿರುವ ಹೆಚ್.ಡಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರಂತೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿಕೊಂಡು ಕೇವಲ 2 ಸ್ಥಾನ ಪಡೆದಿವೆ. ಹೀಗಾಗಿ ಸಿಎಂ ಸ್ಥಾನಕ್ಕೆ ಹೆಚ್ ಡಿಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗ್ತಿದೆ. ಇದರ ನಡುವೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದಾರಂತೆ.

ಹೆಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ದಿನೇಶ್ ಗುಂಡೂರಾವ್, ಕಾಂಗ್ರೆಸ್ ರಾಜ್ಯಾಧ್ಯಕ್ಷ

ಕಳೆದ ಬಾರಿ 9 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಗೆಲುವಿಗೆ ಮಾತ್ರ ಕೈ ಪಡೆ ಸೀಮಿತವಾಯ್ತು. ಹೀಗಾಗಿ ಗುಂಡೂರಾವ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿತಾರಂತೆ. ಇದರ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸಹ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ್ತಾರಂತೆ. ಈ ಸೋಲನ್ನ ಯಾರಾದ್ರೂ ಹೊತ್ತುಕೊಳ್ಳಲೇಬೇಕು. ಹೀಗಾಗಿ ಅದನ್ನ ನಾನೇ ಹೊತ್ತುಕೊಂಡು ರಾಜೀನಾಮೆ ಸಲ್ಲಿಸುತ್ತೇನೆ ಅಂತಾ ಹೇಳಿದ್ದಾರೆ.

ಮಾಜಿ ಸಿಎಂ ಚಂದ್ರಬಾಬು ನಾಯ್ಡು

ಇನ್ನು ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ದು ಪಕ್ಷ ಟಿಡಿಪಿ ಮಣ್ಣುಮಕ್ಕಿದೆ. ವೈ.ಎಸ್ ಜಗನ್ ನಾಯಕತ್ವದ ವೈಎಸ್ಆರ್ ಸಿಪಿ 25 ಸ್ಥಾನಗಳಲ್ಲಿ 22 ಸ್ಥಾನ ಗೆದ್ದು ಅಮರಾವತಿ ಆಳಲು ರೆಡಿಯಾಗಿದೆ. ಹೀಗಾಗಿ ನಾಯ್ಡು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!