ಗ್ರಾ.ಪಂ ವಿರುದ್ಧ ಸಿಡಿದೆದ್ದ ಜನರು

461

ಸಿಂದಗಿ: ಸಂಪರ್ಕವಾಗಿ ಕುಡಿಯುವ ನೀರು ಪೂರೈಕೆ ಮಾಡದೇ ಇರೋ ಚಿಕ್ಕರೂಗಿ ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿಗೆ ಬೀಗ ಜಡಿದು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.

ಚಿಕ್ಕರೂಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಅದರಲ್ಲೂ ಬೇಸಿಗೆ ಟೈಂನಲ್ಲಿ ಇಲ್ಲಿನ ಜನರ ಗೋಳು ಕೇಳುವವರೇ ಇರೋದಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ಹಲವು ಬಾರಿ ತರಲಾಗಿದೆ. ಇವತ್ತು ನೀರು ಬರುತ್ತೆ, ನಾಳೆ ನೀರು ಬರುತ್ತೆ ಅಂತಾ ಹರಕೆ ಉತ್ತರ ನೀಡುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ಜಾವಿದ್ ಕೊಲ್ಹಾರ, ಸಂತೋಷ ಸಿಂದಗಿ, ಬಾಬು ತಾಳಿಕೋಟಿ, ದಾದಾ ಸಿಂದಗಿ ಹಾಗೂ ಸುನೀಲ ನಾಟೀಕಾರ ಸೇರಿದಂತೆ ಗ್ರಾಮಸ್ಥರೆಲ್ಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


TAG


Leave a Reply

Your email address will not be published. Required fields are marked *

error: Content is protected !!