ಮೋದಿ ಸಂಪುಟದ 42 ಸಚಿವರ ವಿರುದ್ಧ ಇವೆ ಕ್ರಿಮಿನಲ್ ಕೇಸ್!

308

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜುಲೈ 7ರ ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದೆ. 15 ಜನ ಕ್ಯಾಬಿನೆಟ್ ಸಚಿವರು ಹಾಗೂ 28 ಜನ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ ಸಂಪುಟದ 78 ಸಚಿವರ ಪೈಕಿ 42 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

33 ಸಚಿವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಇನ್ನು ನಾಲ್ವರ ವಿರುದ್ಧ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಶೇಕಡ 24-31ರಷ್ಟು ಸಚಿವರ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ.

ಮೋದಿ ಸಂಪುಟದ ಅತಿ ಕಿರಿಯ ಸಚಿವರಾಗಿರುವ 35 ವರ್ಷದ ನಿಸಿತ್ ಪ್ರಮಣಿಕ್ ವಿರುದ್ಧ ಕೊಲೆಗೆ ಸಂಬಂಧಿಸಿದ 302 ಪ್ರಕರಣವಿದೆ. ಜುಲೈ 7ರ ಸಚಿವ ಸಂಪುಟ ವಿಸ್ತರಣೆ ಬಳಿಕ ಇವರಿಗೆ ಗೃಹ ಖಾತೆ ರಾಜ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಈ ಬಗ್ಗೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ(ಎಡಿಆರ್) ವರದಿ ಮಾಡಿದೆ.




Leave a Reply

Your email address will not be published. Required fields are marked *

error: Content is protected !!