ಸಿಎಸ್ಕೆ ಆಟಗಾರರ ಅಬ್ಬರ.. ಮುಂಬೈಗೆ 219 ರನ್ ಟಾರ್ಗೆಟ್

255

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದೆಹಲಿ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಭರ್ಜರಿ ಬ್ಯಾಟಿಂಗ್ ಮಾಡಿದೆ. ಅಂಬಟ್ಟಿ ರಾಯ್ಡು 7 ಸಿಕ್ಸ್, 4 ಫೋರ್ ಭಾರಿಸುವ ಮೂಲಕ ಕೇವಲ 27 ಬೌಲ್ ಗಳಲ್ಲಿ 72 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಇನ್ನು ಡುಪ್ಲಸಿ 4 ಸಿಕ್ಸ್, 2 ಫೋರ್ ಸಮೇತ 28 ಬೌಲ್ ಗಳಲ್ಲಿ 50 ರನ್ ಗಳಿಸಿದರು.

ಇತ್ತ ಮೋಯಿನ್ ಅಲಿ 5 ಸಿಕ್ಸ್, 5 ಫೋರ್ ಮೂಲಕ 36 ಬೌಲ್ ಗಳಲ್ಲಿ 58 ರನ್ ಗಳಿಸಿದರು. ಸುರೇಶ ರೈನಾ 2 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ರವೀಂದ್ರ ಜಡೇಜಾ 22 ರನ್ ಗಳಿಸಿದ್ರು. ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 218 ರನ್ ಗಳನ್ನ ಸೇರಿಸಿ ರೋಹಿತ ಪಡೆಗೆ ಬಿಗ್ ಚಾಲೆಂಜ್ ನೀಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರೋಹಿತ ಶರ್ಮಾ ಲೆಕ್ಕಾಚಾರವನ್ನ ಸಿಎಸ್ಕೆ ಟೀಂ ಉಲ್ಟಾ ಮಾಡಿತು. ಮುಂಬೈ ಇಂಡಿಯನ್ಸ್ ಪರ ಪೋಲಾರ್ಡ್ 2, ಬೋಲ್ಟ್ 1, ಬೂಮ್ರಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!