ರೋಹಿತ್ ಶತಕದ ನಡುವೆಯೂ ಸೋತ ಮುಂಬೈ

85

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಭಾನುವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಸಿಎಸ್ಕೆ 20 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಮುಂಬೈ ಆಟಗಾರ ರೋಹಿತ್ ಶರ್ಮಾ ಅಜೇಯ ಶತಕದ ನಡುವೆಯೂ ಸೋಲು ಕಂಡಿದೆ.

ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ, ನಾಯಕರ ಋತುರಾಜ್ ಗಾಯಕವಾಡ್ 69, ಶಿವಂ ದುಬೆ ಅಜೇಯ 66, ರಚಿನ್ ರವೀಂದ್ರ 21, ಮಿಚೆಲ್ 17, ದೋನಿ 20 ರನ್ ಗಳಿಂದಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಮುಂಬೈ ಪರ ನಾಯಕ ಪಾಂಡೆ 2, ಶ್ರೇಯಸ್ ಗೋಪಾಲ್ ಹಾಗೂ ಗೆರಾಲ್ಡ್ ತಲಾ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಮುಂಬೈ ಆರಂಭದಿಂದಲೇ ಭರ್ಜರಿ ಆಟವಾಡಿತು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಜೋಡಿ 7 ಓವರ್ ಗಳಲ್ಲಿ 70 ರನ್ ಗಳಿಸಿತು. ಮಥೀಷಾ ಪಥಿರಾಣ ಇಶಾನ್ 23, ಸೂರ್ಯಕುಮಾರ್ 0 ರನ್ ಗೆ ಔಟ್ ಮಾಡಿದರು. ತಿಲಕ್ ವರ್ಮಾ ಜೊತೆಗೆ ರೋಹಿತ್ 60 ರನ್ ಜೊತೆಯಾಟವಾಡಿ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದರು. ಪಥಿರಾಣ ಮತ್ತೆ ತಿಲಕ್ ವರ್ಮಾ ವಿಕೆಟ್ ಪಡೆದರು.

ನಾಯಕ ಪಾಂಡೆ 2, ಟಿಮ್ ಡೇವಿಡ್ 13, ಶಫರ್ಡ್ 1 ರನ್ ಮಾತ್ರ ಗಳಿಸಿ ಔಟ್ ಆದರು. ಇನ್ನೊಂದು ಕಡೆ ರೋಹಿತ್ ಶರ್ಮಾ ಬ್ಯಾಟ್ ಬೀಸುತ್ತಿದ್ದರು. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ರೋಹಿತ್ ಅಜೇಯ 105 ರನ್ ಗಳಿಸಿದ ಆಟ ವ್ಯರ್ಥವಾಯಿತು. ಸಿಎಸ್ಕೆ ಪರ ಪಥಿರಾಣ 4, ತುಷಾರ್ ದೇಶಪಾಂಡೆ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!