ಕಾಮನವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೆರಡು ಬೆಳ್ಳಿ

288

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬರ್ಮಿಂಗ್ಹ್ಯಾಮ್: ಇಲ್ಲಿ ನಡೆಯುತ್ತಿರುವ ಕಾಮನವೆಲ್ತ್ 2022 ಟೂರ್ನಿಯಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. 10 ಕಿಲೋ ಮೀಟರ್ ವೇಗದ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಹಾಗೂ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆ ಬೆಳ್ಳಿ ಪದಕ ಜಯಿಸಿದ್ದಾರೆ.

ವೇಗದ ನಡಿಗೆಯಲ್ಲಿ 43 ನಿಮಿಷ 38 ಸೆಕೆಂಡ್ ನಲ್ಲಿ ಪ್ರಿಯಾಂಕಾ ಗುರಿ ತಲುಪಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಸಾಧನೆಗೆ ಶುಭಾಶಯಗಳ ಸುರಿಮಳೆ ಸುರಿದಿದೆ.

ಇನ್ನು ಪುರುಷರ ಸ್ಟೀಪಲ್ ಚೇಸ್ ನ 3 ಸಾವಿರ ಮೀಟರ್ ಪಂದ್ಯದಲ್ಲಿ ಅವಿನಾಶ್ ಸಬ್ಲೆ ಬೆಳ್ಳಿ ಪದಕದ ಸಾಧನೆ ಮಾಡಿದರು. ಇವರು ಸಹ ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯರಾದರು. ಈ ಟೂರ್ನಿಯಲ್ಲಿ ಭಾರತ 9 ಚಿನ್ನ, 10 ಬೆಳ್ಳಿ ಹಾಗೂ 9 ಕಂಚು ಪದಕ ಗೆದ್ದು ಐದನೇ ಸ್ಥಾನದಲ್ಲಿದೆ.

55 ಚಿನ್ನ 45 ಬೆಳ್ಳಿ, 46 ಕಂಚು ಸೇರಿ 146 ಪದಕ ಗೆದ್ದಿರುವ ಆಸ್ಟ್ರೇಲಿಯಾ ಟಾಪ್ 1ರಲ್ಲಿದೆ. 47 ಚಿನ್ನ, 47 ಬೆಳ್ಳಿ, 40 ಕಂಚು ಸೇರಿ 134 ಪದಕ ಗೆದ್ದಿರುವ ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ. 19 ಚಿನ್ನ, 26 ಬೆಳ್ಳಿ, 78 ಕಂಚು ಸೇರಿ 73 ಪದಕ ಗೆದ್ದ ಕೆನಡಾ 3ನೇ ಸ್ಥಾನದಲ್ಲಿದೆ. 17 ಚಿನ್ನ, 12 ಬೆಳ್ಳಿ, 13 ಕಂಚು ಸೇರಿ 42 ಪದಕ ಗೆದ್ದ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ.




Leave a Reply

Your email address will not be published. Required fields are marked *

error: Content is protected !!