ಅಂಬಾನಿ ವಿರುದ್ಧ ಡಿ ಬಾಸ್ ದೊಡ್ಡ ಆರೋಪ

271

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ ಉದ್ಯಮಿ ಮುಖೇಶ ಅಂಬಾನಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಫೇಸ್ ಬುಕ್ ಲೈವ್ ಬಂದಿದ್ದ ನಟ ದರ್ಶನ, ಈ ಬಾರಿ ಹುಟ್ಟು ಹಬ್ಬ ಆಚರಣೆ ಇರುವುದಿಲ್ಲ. ದಯವಿಟ್ಟು ಯಾರು ಮನೆಗೆ ಬರಬೇಡಿ. ಮೊದ್ಲು ನಿಮ್ಮ ಮನೆಯ ಬಗ್ಗೆ ವಿಚಾರ ಮಾಡಿದ್ದಾರೆ ಎಂದಿದ್ದಾರೆ.

ಈ ವೇಳೆ ಒಟಿಟಿ ಬಗ್ಗೆ ಅಭಿಮಾನಿ ಒಬ್ಬ ಕೇಳಿದ ಪ್ರಶ್ನೆಗೆ ನಟ ದರ್ಶನ, ಒಂದು ಸಿನಿಮಾ ಹೇಗೆ ರೆಡಿಯಾಗುತ್ತೆ. ಯಾರೆಲ್ಲ ಕಷ್ಟ ಪಡುತ್ತಾರೆ ಅನ್ನೋದನ್ನ ಹೇಳಿದ ಅವರು, ನಾವು ಪಡುವ ಶ್ರಮವನ್ನ ಮೊಬೈಲ್, ಟಿವಿಯಲ್ಲಿ ನೋಡಿದ್ರೆ ಏನು ಮಜಾ ಬರುವುದಿಲ್ಲ. ಅಂಬಾನಿ ಅವರ 5ಜಿ ಬರುತ್ತೆ. ಮೊಬೈಲ್ ನಲ್ಲಿ ನೋಡಿದ್ರೆ ಅವರಿಗೆ ಲಾಭ. ಇದೊಂದು ದೊಡ್ಡ ಸ್ಕ್ಯಾಮ್. ಹೀಗಾಗಿ ಒಟಿಟಿಯಲ್ಲಿ ನಾವು ಸಿನಿಮಾ ರಿಲೀಸ್ ಮಾಡುವುದಿಲ್ಲ. ಈಗ ಶೇಕಡ 50ರಷ್ಟು ಸೀಟ್ ಇದೆ. ಅದು ಶೇಕಡ 25ರಷ್ಟು ಆದ್ರೂ ನಾವು ಥಿಯೇಟರ್ ನಲ್ಲಿಯೇ ಬರುತ್ತೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!