ಮೋಸಗಾತಿ ಬ್ಯೂಟಿ ನಂಬಿ ಮೋಸ ಹೋಗಿದ್ಯಾರು..?

264

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಡಿ ಬಾಸ್ ನಟ ದರ್ಶನ, ಅವರ ಸ್ನೇಹಿತರು ಹಾಗೂ ನಿರ್ಮಾಪಕ ಉಮಾಪತಿ ಅವರ ನಡುವೆ ಇದೀಗ ಸಮರಕ್ಕೆ ಕಾರಣವಾಗಿದ್ದು, 25 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ್ದ ಮೋಸಗಾತಿಯಿಂದ. ಇದೀಗ ಎರಡು ಕಡೆ ಬಿಗ್ ಟಾಕ್ ಫೈಟ್ ನಡೆದಿದೆ. ಇಷ್ಟಕ್ಕೆಲ್ಲ ಕಾರಣವಾದ ಲೇಡಿ ಅರುಣಾಕುಮಾರಿ, ಮೋಸಗಾತಿ ಎನ್ನಲಾಗ್ತಿದೆ.

ನೋಡಲು ಒಂದಿಷ್ಟು ಚೆಂದವಾಗಿರುವ ಅರುಣಾಕುಮಾರಿ, ಫೇಸ್ ಬುಕ್ ಮೂಲಕ ಸಹ ಹಲವರಿಗೆ ಮೋಸ ಮಾಡಿದ್ದಾಳಂತೆ. ಅಸಲಿಗೆ ಈಕೆ ರೋಲ್ ಕಾಲ್ ಗಿರಾಕಿಯಂತೆ. ಫೇಸ್ ಬುಕ್ ಮೆಸೇಂಜರ್ ಮೂಲಕ ಹಣ ಕೇಳುತ್ತಿದ್ದಳಂತೆ. ಹೀಗಾಗಿ ಫೇಸ್ ಬುಕ್ ಮೂಲಕ ಪಡ್ಡೆ ಹುಡುಗರಿಗೆ ಗಾಳ ಹಾಕಲು, ಒಳ್ಳೊಳ್ಳೆ ಫೋಟೋ ಹಾಕ್ತಿದ್ದಳಂತೆ.

ಹೀಗೆ ಹಲವು ಜನರಿಗೆ ಈಕೆ ಮೋಸ ಮಾಡಿದ್ದಾಳಂತೆ. ಆದ್ರೆ, ಮಹಿಳೆದು ಬೇರೆ. ನನ್ನ ಗಂಡ ಏನೂ ಚಾಚವಲ್ಲ. ನನ್ನ ಕುಟುಂಬ ಸಾಕಷ್ಟು ಕಷ್ಟ ಅನುಭವಿಸ್ತಿದೆ. ಉಮಾಪತಿ ಅವರು ತಪ್ಪು ಮಾಡಿದ್ರು. ಇದರಲ್ಲಿ ಸುಮ್ಮನೆ ನನ್ನ ಹೆಸರು ಬಳಸಿಕೊಂಡರು ಎಂದು ಹೇಳಿದ್ದಾಳೆ. ಚಾಟಿಂಗ್ 32 ಪೇಜಿಂಗ್ ಇದೆ ಅನ್ನೋದು ಸುಳ್ಳ. ವಾಟ್ಸಪ್ ಚಾಟ್ಸ್, ಕಾಲ್ ರೆಕಾರ್ಡ್ಸ್ ಲೀಕ್ ಆಗಿದ್ದು ಎಲ್ಲೆಡೆ ವೈರಲ್ ಆಗಿದೆ. ಹೀಗಾಗಿ ಇಡೀ ಪ್ರಕರಣ ಒಂದೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.




Leave a Reply

Your email address will not be published. Required fields are marked *

error: Content is protected !!