ಮಂಗಳವಾರ ಮೊದಲ ಹಂತದ ಮತದಾನ: ಕಂಪ್ಲೀಟ್ ಮಾಹಿತಿ ಇಲ್ಲಿದೆ

301

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಷ್ಟು ದಿನಗಳಿಂದ ಕಾಯುತ್ತಿದ್ದ ಲೋಕಲ್ ಫೈಟ್ ಕೊನೆ ಹಂತ ತಲುಪಿದೆ. ಮಂಗಳವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ರಾಜ್ಯದ 113 ತಾಲೂಕುಗಳ 3,019 ಗ್ರಾಮ ಪಂಚಾಯಿತಿಗಳ 48,048 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದ್ರೆ, 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿರುವುದ್ರಿಂದ 43,238 ಸ್ಥಾನಗಳಿಗೆ ಎಲೆಕ್ಷನ್ ನಡೆಯಲಿದೆ.

ಡಿಸೆಂಬರ್ 22ರಂದು ಮೊದಲ ಹಂತವಿದ್ದು, ಬೆಳಗ್ಗೆ 7ಗಂಟೆಯಿಂದ ಸಂಜೆ ಗಂಟೆಯ ತನಕ ಮತದಾನ ನಡೆಯಲಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಬೆಂಗಳೂರು ನಗರ ತಾಲೂಕಿನ 11 ಕ್ಷೇತ್ರ, ಯಲಹಂಕ 14 ಸೇರಿ 25. ಬೆಂಗಳೂರು ಗ್ರಾಮಾಂತರದಲ್ಲಿ ಹೊಸಕೋಟೆಯ 26, ನೆಲಮಂಗಲ 21 ಸೇರಿದಂತೆ 47. ರಾಮನಗರ 20, ಕನಪುರ 36 ಸೇರಿ 56. ಚಿತ್ರದುರ್ಗ 38, ಹೊಳಲ್ಕೆರೆ 29, ಹೊಸದುರ್ಗ 33 ಸೇರಿ 110. ದಾವಣಗೆರೆ 38, ಹೊನ್ನಳ್ಳಿ 28,ಜಗಳೂರು 22 ಸೇರಿ 88. ಕೋಲಾರ 32, ಮಾಲೂರು 28, ಶ್ರೀನಿವಾಸಪುರ 25 ಸೇರಿ 85. ಚಿಕ್ಕಬಳ್ಳಾಪುರದಲ್ಲಿ ಶಿಡ್ಲಘಟ್ಟ 25, ಚಿಂತಾಮಣಿ 35, ಬಾಗೇಪಲ್ಲಿ 25 ಸೇರಿದಂತೆ 85 ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯುತ್ತಿದೆ.

ಶಿವಮೊಗ್ಗ 40, ಭದ್ರಾವತಿ 35, ತೀರ್ಥಹಳ್ಳಿ 38 ಸೇರಿ 113. ತುಮಕೂರು 41, ಕುಣಿಗಲ್ 36, ಗುಬ್ಬಿ 34, ಕೊರಟಗೆರೆ 24, ಪಾವಗಡ 33 ಸೇರಿ 168. ಮೈಸೂರಿನಲ್ಲಿ ಹುಣಸೂರು 41, ಕೆ.ಆರ್ ನಗರ 34, ಪಿರಿಯಾಪಟ್ಟಣ 34, ಎಚ್.ಡಿ ಕೋಟೆ 26, ಸರಗೂರು 13 ಸೇರಿ 148. ಚಿಕ್ಕಮಗಳೂರು 41, ಮೂಡಿಗೆರೆ 26, ಕೊಪ್ಪ 21, ಶೃಂಗೇರಿ 9, ನರಸಿಂಹರಾಜಪುರ 14, ಕಡೂರು 49, ತರೀಕೆರಿ 25, ಅಜ್ಜಂಪುರ 24 ಸೇರಿ 209. ಮಗಳೂರು 37, ಮೂಡಬಿದರೆ 12, ಬಂಟ್ವಾಳ 57 ಸೇರಿದಂತೆ 106. ಉಡುಪಿ 16, ಹೆಬ್ರಿ 9, ಬ್ರಹ್ಮಾವರ 27, ಬೈಂದೂರು 15 ಸೇರಿ 67. ಮಡಿಕೇರಿ 26, ಸೋಮವಾರಪೇಟೆ 40 ಸೇರಿ 66 ಗ್ರಾಮ ಪಂಚಾಯ್ತಿ ಕ್ಷೇತ್ರಗಳಿಗೆ ಮತದಾನ.

ಹಾಸನ 26, ಅರಕಲಗೂಡು 35, ಚನ್ನರಾಯಪಟ್ಟಣ 40, ಸಕಲೇಶಪುರ 24 ಸೇರಿ 125. ಮಂಡ್ಯ 46, ಮದ್ದೂರು 42, ಮಳವಳ್ಳಿ 38 ಸೇರಿ 126. ಚಾಮರಾನಗರ 43, ಗುಂಡ್ಲಪೇಟೆ 34 ಸೇರಿ 77. ಬೆಳಗಾವಿ 55, ಖಾನಪುರ 51, ಹುಕ್ಕೇರಿ 52, ಬೈಲಹೊಂಗಲ 33, ಕಿತ್ತೂರು 16, ಗೋಕಾಕ 32, ಮೂಡಲಗಿ 20 ಸೇರಿ 259. ವಿಜಯಪುರ 17, ಬಬಲೇಶ್ವರ 15, ತಿಕೋಟ 14, ಬಸವನಬಾಗೇವಾಡಿ 15, ನಿಡಗುಂದಿ 8, ಕೊಲ್ಹಾರ 8, ಮುದ್ದೇಬಿಹಾಳ 20, ತಾಳಿಕೋಟೆ 14 ಸೇರಿ 111. ಬಾಗಲಕೋಟೆಯ ಜಮಖಂಡಿ 26, ಮುಧೋಳ 22, ಬೀಳಗಿ 24, ರಬಕವಿ-ಬನಹಟ್ಟಿ 17 ಸೇರಿ 89 ಗ್ರಾಮ ಪಂಚಾಯ್ತಿಗೆ ವೋಟಿಂಗ್.

ಇನ್ನು ಧಾರವಾಡ 34, ಅಳ್ವಾರ 4, ಕಲಘಟಗಿ 27 ಸೇರಿ 65. ಗದಗ 26, ಶಿರಹಟ್ಟಿ 14, ಲಕ್ಷ್ಮೀಶ್ವರ 13 ಸೇರಿ 53. ಹಾವೇರಿಯ ರಾಣೇಬೆನ್ನೂರು 33, ಹಾವೇರಿ 33, ಹಿರೆಕೆರೂರು 19, ರಟ್ಟೆಹಳ್ಳಿ 19 ಸೇರಿ 104. ಕಾರವಾರ 18, ಅಂಕೋಲ 21, ಕುಮಟ 22, ಹೊನ್ನಾವರ 24, ಭಟ್ಕಳ 16 ಸೇರಿದಂತೆ 101. ಕುಲಬುರಗಿ 28, ಆಳಂದ 36, ಅಫ್ಜಲಪುರ 28, ಕಮಲಾಪುರ 16, ಕಾಳಗಿ 14, ಶಹಭಾಗ್ 4 ಸೇರಿದಂತೆ 126. ಬೀದರನ ಬಸವಕಲ್ಯಾಣ 31, ಹುಲಸೂರ 4, ಹುಮ್ನಾಬಾದ್ 19, ಚಿಟಗುಪ್ಪ 12, ಬಾಲ್ಕಿ 40 ಸೇರಿ 106. ಬಳ್ಳಾರಿ 25, ಕುರುಗೋಡು 12, ಶಿರಗುಪ್ಪ 27, ಹೊಸಕೋಟೆ 13, ಕಂಪ್ಲಿ 10 ಸೇರಿ 87. ಯಾದಗಿರಿಯ ಶಹಾಪುರ 24, ಸುರಪುರ 21, ಹುಣಸಗಿ 18 ಸೇರಿ 63. ಕೊಪ್ಪಳ 38, ಯಲಬುರ್ಗ 20, ಕುಕನೂರು 15 ಸೇರಿದಂತೆ 74 ಗ್ರಾಮ ಪಂಚಾಯ್ತಿ ಸ್ಥಾನಗಳಿಗೆ ಮತದಾನ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!